ಮಾಸ್ಕೊ: ರಷ್ಯಾದ ಪೂರ್ವ ಭಾಗದಲ್ಲಿ ನಾಪತ್ತೆಯಾಗಿದ್ದ ಹೆಲಿಕಾಪ್ಟರ್‌ನ ಅವಶೇಷಗಳು ಮತ್ತು 17 ಜನರ ಮೃತದೇಹಗಳು ಪತ್ತೆಯಾಗಿವೆ.
‘ಹೆಲಿಕಾಪ್ಟರ್‌ನಲ್ಲಿ ಒಟ್ಟು 22 ಜನರು ಪ್ರಯಾಣಿಸುತ್ತಿದ್ದರು. ಉಳಿದ ಐವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ’ ಎಂದು ರಷ್ಯಾದ ತುರ್ತುಪರಿಸ್ಥಿತಿ ನಿರ್ವಹಣೆಯ ಸಚಿವಾಲಯ ಭಾನುವಾರ ತಿಳಿಸಿದೆ.
‘ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ’ ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಆರ್‌ಐಎ ನೊವೊಸ್ಟಿ ವರದಿ ಮಾಡಿದೆ.
‘ಹವಾಮಾನ ವೈಪರೀತ್ಯದ ಪರಿಣಾಮ ಹೆಲಿಕಾಪ್ಟರ್ ಪತನಗೊಂಡಿರುವ ಸಾಧ್ಯತೆಯಿದೆ’ ಎಂದು ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ.
‘ಶನಿವಾರ ಕಾಮ್ಚಟ್ಕ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಎಂಐ–8 ಹೆಲಿಕಾಪ್ಟರ್ ನಿಗದಿತ ಸ್ಥಳಕ್ಕೆ ತಲುಪದೇ ಸಂಪರ್ಕ ಕಳೆದುಕೊಂಡಿತ್ತು. ಸಂಪರ್ಕ ಕಳೆದುಕೊಂಡಿರುವ ಸ್ಥಳದಲ್ಲೇ ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾಗಿದೆ’ ಎಂದು ರಷ್ಯಾದ ಫೆಡರಲ್ ವಿಮಾನ ಯಾನ ಸಂಸ್ಥೆ ತಿಳಿಸಿದೆ.