ಬೀಜಿಂಗ್: ಟಿಬೆಟ್‌ನ ರಾಜಧಾನಿ ಲಾಸಾಗೆ ಮೊದಲ ಬಾರಿಗೆ ಬೇಸಿಗೆ ಕಾಲಿರಿಸಿದೆ ಎಂದು ಚೀನಾದ ಪ್ರಾದೇಶಿಕ ಹವಾಮಾನ ಕೇಂದ್ರ ಗುರುವಾರ ಹೇಳಿದೆ.

ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎಂದೂ ಹೇಳಿದೆ.

ಸಮುದ್ರ ಮಟ್ಟದಿಂದ ಸರಾಸರಿ 3,650 ಮೀಟರ್ ಎತ್ತರದಲ್ಲಿರುವ ಲಾಸಾದಲ್ಲಿ ಜೂನ್ 23ರಂದು ಸರಾಸರಿ ತಾಪಮಾನ 22 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಜೂನ್ 25 ಮತ್ತು 29ರಂದು ತಾಪಮಾನವು ಇದಕ್ಕಿಂತ ಅಧಿಕವಾಗಿತ್ತು ಎಂದು ಚೀನಾದ ಮಾಧ್ಯಮಗಳು
ವರದಿ ಮಾಡಿವೆ.

ಚೀನಾದ ಸ್ವಾಯತ್ತ ಪ್ರದೇಶವಾಗಿರುವ ಟಿಬೆಟ್‌ನಲ್ಲಿ ಈಗ ತಂಪು ಪಾನೀಯಗಳಿಗೆ ಹಾಗೂ ಫ್ಯಾನ್‌ಗಳಿಗೆ ಬೇಡಿಕೆ ಹೆಚ್ಚಿದೆ.

ಜೂನ್ ಆರಂಭದಲ್ಲಿ ಇಲ್ಲಿ ಸರಾಸರಿ ತಾಪಮಾನ 13.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಹಿಂದಿನ ದತ್ತಾಂಶಗಳನ್ನು ಪರಿಶೀಲಿಸಿದರೆ ಇದು 1.3 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಲಾಸಾ ಸಾಂಪ್ರದಾಯಿಕವಾಗಿ ಬೇಸಿಗೆ ರಹಿತ ಪ್ರದೇಶವಾಗಿದೆ. ಆದರೆ ಈ ಬಾರಿ ಹವಾಮಾನದಲ್ಲಿ ಉಂಟಾದ ಬದಲಾವಣೆಯಿಂದಾಗಿ ಈಗ ಬೇಸಿಗೆ ಆರಂಭವಾಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಿಬೆಟ್‌ನ ಹಿಮನದಿಗಳು ಕರಗುತ್ತಿವೆ ಎಂದು ಈ ಹಿಂದೆಯೇ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.