ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕ್‌ಟಾಕ್‌ ಆ್ಯಪ್‌ಗೆ ₹ 3000 ಕೋಟಿ ದಂಡ

Published 15 ಸೆಪ್ಟೆಂಬರ್ 2023, 15:39 IST
Last Updated 15 ಸೆಪ್ಟೆಂಬರ್ 2023, 15:39 IST
ಅಕ್ಷರ ಗಾತ್ರ

ಲಂಡನ್‌ (ಎ.ಪಿ): ಯೂರೋಪ್‌ನ ಕಠಿಣ ದತ್ತಾಂಶ ಖಾಸಗೀತನ ನಿಯಮದ ಅನುಸಾರ ಟಿಕ್‌ ಟಾಕ್‌ಗೆ ಮೊಬೈಲ್‌ ಆ್ಯಪ್‌ ಸಂಸ್ಥೆಗೆ ಐರ್ಲೆಂಡ್‌ನ ತನಿಖಾ ಆಯೋಗವು, ಸುಮಾರು ₹ 3000 ಕೋಟಿ (368 ಮಿಲಿಯನ್‌ ಡಾಲರ್) ದಂಡ ವಿಧಿಸಿದೆ. 

ವಿಡಿಯೊ ಹಂಚಿಕೆಯ ಆ್ಯಪ್‌ ಟಿಕ್‌ ಟಾಕ್‌ಗೆ ಬೃಹತ್‌ ಮೊತ್ತದ ದಂಡ ವಿಧಿಸಿರುವುದು ಇದೇ ಮೊದಲು. ಐರ್ಲೆಂಡ್‌ನ ದತ್ತಾಂಶ ರಕ್ಷಣಾ ಆಯೋಗವು, ‘2020 ದ್ವಿತೀಯಾರ್ಧದಲ್ಲಿ ಆಗಿರುವ ನಿಯಮ ಉಲ್ಲಂಘನೆಗಾಗಿ ಈ ದಂಡ ವಿಧಿಸಲಾಗಿದೆ’ ಎಂದು ತಿಳಿಸಿದೆ.

ಈ ಸಂಬಂಧ ಹೇಳಿಕೆ ನೀಡಿರುವ ಟಿಕ್‌ಟಾಕ್‌ ಸಂಸ್ಥೆಯು, ಈ ನಿರ್ಧಾರ ಕುರಿತು ಮುಖ್ಯವಾಗಿ ದಂಡದ ಪ್ರಮಾಣದ ಬಗ್ಗೆ ಅಸಮಾಧಾನವಿದೆ ಎಂದು ಪ್ರತಿಕ್ರಿಯಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT