ಬೀಜಿಂಗ್: ‘ಕೋವಿಡ್–19 ಪಿಡುಗು ಸೇರಿದಂತೆ ವಿವಿಧ ಕಾರಣಗಳಿಗಾಗಿ ಇಡೀ ವಿಶ್ವವೇ ಹಿಂದೆಂದೂ ಕಾಣದಂಥ ಪ್ರಕ್ಷುಬ್ಧ ಪರಿಸ್ಥಿತಿ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಒದಗಿರುವ ಹೊಸ ಅವಕಾಶಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ನಮಗಿದ್ದು, 2030ರ ವೇಳೆಗೆ ಪುನಶ್ಚೇತನಗೊಂಡ ಚೀನಾ ಕಟ್ಟೋಣ’ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್ ಹೇಳಿದ್ದಾರೆ.

ಚೀನಾ ಕಮ್ಯುನಿಸ್ಟ್ ಪಾರ್ಟಿಯ (ಸಿಪಿಸಿ) ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಾವೊ ಜೆಡಾಂಗ್ ಅವರು 1921ರಲ್ಲಿ ಸ್ಥಾಪಿಸಿದ ಸಿಪಿಸಿಯ ಸಾರಥ್ಯವನ್ನು ಷಿ ಜಿನ್‌ಪಿಂಗ್ 2012ರಲ್ಲಿ ವಹಿಸಿಕೊಂಡರು. 67 ವರ್ಷದ ಜಿನ್‌ಪಿಂಗ್, ಈಗ ಮಾವೊ ನಂತರ ಅತ್ಯಂತ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ.

‘ಕೋವಿಡ್ ಪಿಡುಗು, ಸಾಗಣೆ ಕ್ಷೇತ್ರದಲ್ಲಿ ಅಡೆತಡೆಗಳು, ಪಾಶ್ವಿಮಾತ್ಯ ರಾಷ್ಟ್ರಗಳೊಂದಿಗಿನ ಸಂಬಂಧದಲ್ಲಿ ಬಿರುಕು ಹಾಗೂ ಕುಸಿಯುತ್ತಿರುವ ಆರ್ಥಿಕತೆಯಂಥ ಸವಾಲುಗಳು ನಮ್ಮ ಮುಂದಿವೆ. ಈ ಸಂಕಷ್ಟ ಪರಿಸ್ಥಿತಿ ನಡುವೆಯೂ ದೇಶವನ್ನು ಕಟ್ಟುವ ಸಲುವಾಗಿ ನಮ್ಮ ಮುಂದೆ ಹೊಸ ಅವಕಾಶಗಳಿವೆ’ ಎಂಬ ಜಿನ್‌ಪಿಂಗ್ ಹೇಳಿಕೆಯನ್ನು ಉಲ್ಲೇಖಿಸಿ ಹಾಂಗ್‌ಕಾಂಗ್ ಮೂಲದ ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

‘ಸಂಕಷ್ಟವನ್ನು ಮೀರಿ ಬೆಳೆಯುವ ಸಂಕಲ್ಪವನ್ನು ಮಾಡಬೇಕಿದೆ. ದೇಶವನ್ನು ಮತ್ತೆ ಕಟ್ಟುವ ಬದ್ಧತೆ, ಆತ್ಮವಿಶ್ವಾಸವನ್ನು ನಾವು ಪ್ರದರ್ಶಿಸಬೇಕಿದೆ’ ಎಂದೂ ಜಿನ್‌ಪಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.