ದಾವೋಸ್: ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೂತನ 'ಶಾಂತಿ ಮಂಡಳಿ' ಅನ್ನು ಉದ್ಘಾಟಿಸಿದ್ದಾರೆ.

ಶಾಂತಿ ಮಂಡಳಿ (Board of Peace) ಉದ್ದೇಶ ಏನು?

ಗಾಜಾದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡುವ ಉದ್ದೇಶದಿಂದ ಶಾಂತಿ ಮಂಡಳಿ ರಚನೆಯಾಗಿದೆ. ಇಸ್ರೇಲ್ ಹಾಗೂ ಗಾಜಾ ಪಟ್ಟಿಯ ಹಮಾಸ್ ಬಂಡುಕೋರರ ನಡುವಿನ ಕದನ ವಿರಾಮ ಒಪ್ಪಂದದ 2ನೇ ಹಂತದ ಭಾಗವಾಗಿ ಟ್ರಂಪ್ ಈ 'ಶಾಂತಿ ಮಂಡಳಿ' ರಚಿಸಿದ್ದಾರೆ.

ಕಳೆದ ವರ್ಷ ನವೆಂಬರ್ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶಾಂತಿ ಮಂಡಳಿಗೆ ಅನುಮೋದನೆ ನೀಡಿತ್ತು.
.'ಪೀಸ್ ಅಥವಾ ಪೀಸ್..ಪೀಸ್': ಶಾಂತಿ ಮಂಡಳಿ ಬಗ್ಗೆ ಟ್ರಂಪ್ ವ್ಯಂಗ್ಯವಾಡಿದ ಮಸ್ಕ್.ವಿದೇಶ ವಿದ್ಯಮಾನ | ಟ್ರಂಪ್ ಆಡಳಿತಕ್ಕೆ 1 ವರ್ಷ: ತಾಳ್ಯಾಕ ತಂತ್ಯಾಕ; ಜಗದ ಹಂಗ್ಯಾಕ.
ಕಾರ್ಯಕ್ರಮದಿಂದ ದೂರವುಳಿದ ಭಾರತ...

ಗುರುವಾರ ಡೊನಾಲ್ಡ್ ಟ್ರಂಪ್ ಆಯೋಜಿಸಿದ್ದ ಶಾಂತಿ ಮಂಡಳಿಯಲ್ಲಿ ಸಹಿ ಹಾಕುವ ಕಾರ್ಯಕ್ರಮದಿಂದ ಭಾರತ ದೂರ ಉಳಿದಿದೆ. ಈ ಕಾರ್ಯಕ್ರಮಕ್ಕೆ ಫ್ರಾನ್ಸ್, ಬ್ರಿಟನ್, ಚೀನಾ, ಜರ್ಮನಿ ಸೇರಿ ಇತರ ದೇಶಗಳು ಕೂಡ ಗೈರಾಗಿದ್ದವು.

ಪ್ರಧಾನಿ ಮೋದಿಗೆ ಆಹ್ವಾನ ನೀಡಿದ್ದ ಟ್ರಂಪ್...

'ಶಾಂತಿ ಮಂಡಳಿ' ಭಾಗವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಟ್ರಂಪ್ ಆಹ್ವಾನ ನೀಡಿದ್ದರು. ಆದರೆ ಈ ಕುರಿತು ಭಾರತ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೂ ಟ್ರಂಪ್ ಆಹ್ವಾನ ನೀಡಿದ್ದರು. ಆದರೆ ರಷ್ಯಾದ ಯಾವುದೇ ಪ್ರತಿನಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.

ಶಾಂತಿ ಮಂಡಳಿಯ ಭಾಗವಾದ ಪಾಕಿಸ್ತಾನ...

ಪಾಕಿಸ್ತಾನ, ಯುಎಇ, ಸೌದಿ ಅರೇಬಿಯಾ, ಈಜಿಪ್ಟ್ ಸೇರಿ ಹಲವು ರಾಷ್ಟ್ರಗಳು ಈ ಮಂಡಳಿ ಸೇರಿವೆ. ಅಲ್ಬೇನಿಯಾ, ಅರ್ಮೇನಿಯಾ, ಅಜರ್ಬೈಜಾನ್, ಬಹರೇನ್, ಬೆಲಾರಸ್, ಬಲ್ಗೇರಿಯಾ, ಹಂಗೇರಿ, ಇಂಡೋನೇಷ್ಯಾ, ಜಾರ್ಡನ್, ಕಜಕಿಸ್ತಾನ, ಕೊಸೊವೊ, ಮೊರಾಕೊ, ಮಂಗೋಲಿಯಾ, ಕತಾರ್, ತುರ್ಕಿ, ಉಜ್ಬೇಕಿಸ್ತಾನ, ವಿಯೆಟ್ನಾಂ ಸಹ ಸೇರಿವೆ.

19 ರಾಷ್ಟ್ರಗಳ ಪ್ರತಿನಿಧಿಗಳಷ್ಟೇ ಭಾಗಿ...

ಶಾಂತಿ ಮಂಡಳಿಗೆ 59 ದೇಶಗಳು ಸಹಿ ಹಾಕಿವೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ಆದರೆ ದಾವೋಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇವಲ 19 ದೇಶಗಳ ಪ್ರತಿನಿಧಿಗಳಷ್ಟೇ ಹಾಜರಿದ್ದರು.

ಟ್ರಂಪ್ ಹೇಳಿದ್ದೇನು?

'ಜಗತ್ತಿನ ಬಲಿಷ್ಠ ವ್ಯಕ್ತಿಗಳ ಸಾಲಿನಲ್ಲಿ ನೀವು ಗುರುತಿಸಿಕೊಂಡಿದ್ದೀರಿ. ಇದು ಅಮೆರಿಕಕ್ಕಾಗಿ ಮಾಡಿದ್ದಲ್ಲ. ಇಡೀ ಜಗತ್ತಿಗಾಗಿ ಮಾಡಿದ್ದಾಗಿದೆ. ಗಾಜಾದಲ್ಲಿ ಯಶಸ್ಸಿನ ಬಳಿಕ ಮತ್ತಷ್ಟು ವಿಸ್ತರಿಸಬಹುದಾಗಿದೆ' ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಕೆಲವು ಕಾರ್ಯಗಳನ್ನು ಬದಲಾಯಿಸುವ ಬಗ್ಗೆಯೂ ಟ್ರಂಪ್ ಈಗಾಗಲೇ ಸೂಚನೆ ನೀಡಿದ್ದಾರೆ. ಹಾಗಾಗಿ ಕ್ರಮೇಣ ಇದು ವಿಶ್ವಸಂಸ್ಥೆಗೆ ಬದಲಿ ವ್ಯವಸ್ಥೆಯಾಗಿ ರೂಪುಗೊಳ್ಳುವುದೇ ಎಂಬ ಚರ್ಚೆ ಹುಟ್ಟು ಹಾಕಿದೆ.
.Greenland Row: ಯುರೋಪ್ ರಾಷ್ಟ್ರಗಳ ಮೇಲಿನ ಸುಂಕ ಬೆದರಿಕೆ ಕೈಬಿಟ್ಟ ಟ್ರಂಪ್.ಫ್ಯಾಕ್ಟ್ ಚೆಕ್: ಟ್ರಂಪ್ ವಿರುದ್ಧ ಭಾರಿ ಪ್ರತಿಭಟನೆ ನಡೆಸಲಾಯಿತು ಎಂಬುದು ಸುಳ್ಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.