ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಮರ್ಥ್ಯ ಸಾಬೀತುಪಡಿಸಲು ಬೈಡನ್‌ಗೆ ಮತ್ತೆ ಅವಕಾಶ ನೀಡುತ್ತಿದ್ದೇನೆ: ಟ್ರಂಪ್

Published 10 ಜುಲೈ 2024, 14:32 IST
Last Updated 10 ಜುಲೈ 2024, 14:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರು ಪ್ರತಿಸ್ಪರ್ಧಿ ಜೋ ಬೈಡನ್‌ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಈ ವಾರ ತಮ್ಮ ಜೊತೆ ಚರ್ಚೆಗೆ ಬರುವಂತೆ ಮತ್ತು ಗಾಲ್ಫ್‌ ಆಟ ಆಡುವಂತೆ ಪಂಥಾಹ್ವಾನ ನೀಡಿದ್ದಾರೆ.

ಫ್ಲಾರಿಡಾದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ‘ಜಗತ್ತಿನ ಎದುರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ಜೋ ಬೈಡನ್‌ ಅವರಿಗೆ ಅಧಿಕೃತವಾಗಿ ಅವಕಾಶ ನೀಡುತ್ತಿದ್ದೇನೆ. ಈ ವಾರ ಮತ್ತೊಂದು ಚರ್ಚೆ ನಡೆಸೋಣ’ ಎಂದು ಹೇಳಿದ್ದಾರೆ.

‘ಈ ಬಾರಿ ನೇರಾನೇರ ಚರ್ಚೆ ಇರಲಿ, ಮಧ್ಯಸ್ಥಿಕೆಗೆ ಯಾರೂ ಬೇಡ. ಎಲ್ಲಿ, ಯಾವಾಗಲಾದರೂ ನಾನು ಸಿದ್ಧ’ ಎಂದು ಸವಾಲು ಹಾಕಿದ್ದಾರೆ.

ಕಳೆದ ತಿಂಗಳು ನಡೆದ ಚರ್ಚೆಯ ನಂತರ ಟ್ರಂಪ್‌ ಹೆಚ್ಚು ಆತ್ಮವಿಶ್ವಾಸ ಗಳಿಸಿದಂತೆ ಕಾಣುತ್ತಿದ್ದಾರೆ.

ಜೂನ್‌ 27ರಂದು ನಡೆದ ಚರ್ಚೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಬೈಡನ್‌ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಇದಾದ ನಂತರ ಪಕ್ಷದ ಸಹೋದ್ಯೋಗಿಗಳೇ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಅವರನ್ನು ಒತ್ತಾಯಿಸಿದ್ದರು. ಬೈಡನ್‌ ಇದನ್ನು ನಿರಾಕರಿಸಿದ್ದಾರೆ.

ಬೈಡನ್‌ ಅವರ ಬಳಗವು ಟ್ರಂಪ್‌ ಸವಾಲುಗಳನ್ನು ಸ್ವೀಕರಿಸಲು ನಿರಾಕರಿಸಿದೆ.‌

‘ಟ್ರಂಪ್‌ ಕ್ಷುಲ್ಲಕ ಬೇಡಿಕೆಗಳಿಗೆ ಸ್ಪಂದಿಸಲು ಬೈಡನ್ ಅವರ ಬಳಿ ಸಮಯ ಇಲ್ಲ. ಅಮೆರಿಕವನ್ನು ಮುನ್ನಡೆಸುವುದರಲ್ಲಿ ಅವರು ನಿರತರಾಗಿದ್ದಾರೆ. ಟ್ರಂಪ್‌ ಸುಳ್ಳುಗಾರ, ಅಪರಾಧಿ ಮತ್ತು ವಂಚಕ’ ಎಂದು ಬೈಡನ್‌ ಅವರ ವಕ್ತಾರ ಜೇಮ್ಸ್‌ ಸಿಂಗರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT