ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಈಗ ಅಮೆರಿಕದ ಅಧ್ಯಕ್ಷರಲ್ಲ. ಹೀಗಾಗಿ ಅವರ ವಿರುದ್ಧ ಮಂಡಿಸಲಾಗುವ ವಾಗ್ದಂಡನೆ ನಿರ್ಣಯವೇ ಅಸಾಂವಿಧಾನಿಕ. ಈ ನಿರ್ಣಯವನ್ನು ವಜಾ ಮಾಡಬೇಕು ಎಂದು ಟ್ರಂಪ್ ಪರ ವಕೀಲರು ಹೇಳಿದ್ದಾರೆ.

ಈ ವಾಗ್ದಂಡನೆ ನಿರ್ಣಯವನ್ನು ಫೆ. 8ರಂದು ಸೆನೆಟ್‌ನಲ್ಲಿ ಮಂಡಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ 80 ಪುಟಗಳ ವಿವರಗಳನ್ನು ಡೆಮಾಕ್ರಟಿಕ್ ಸಂಸದರು ಬಿಡುಗಡೆ ಮಾಡಿದ್ದಾರೆ. ಇನ್ನು ಮುಂದೆ ಟ್ರಂಪ್ ಅವರು ಆಡಳಿತದ ಯಾವುದೇ ಹುದ್ದೆಗೆ ಏರದಂತೆ ನಿಷೇಧ ಹೇರುವ ಪ್ರಸ್ತಾವವನ್ನು ಸಹ ಈ ನಿರ್ಣಯ ಒಳಗೊಂಡಿದೆ.

100 ಸದಸ್ಯ ಬಲದ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಸದಸ್ಯರ ಸಂಖ್ಯೆ 50. ಟ್ರಂಪ್ ವಿರುದ್ಧದ ವಾಗ್ದಂಡನೆ ಯಶಸ್ವಿಯಾಗಬೇಕಾದರೆ 17 ಜನ ರಿಪಬ್ಲಿಕನ್ ಸಂಸದರ ಬೆಂಬಲ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.