ಭಾರತದ 6 ಕಂಪನಿಗಳಿಗೆ ನಿರ್ಬಂಧ
ಇರಾನ್ ಮೂಲದ ಕಂಪನಿಗಳ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿ ಮತ್ತು ಮಾರಾಟ ಮಾಡಿದ್ದಕ್ಕೆ ಭಾರತದ ಆರು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. ‘ಇರಾನ್ ಆಡಳಿತವು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಉತ್ತೇಜಿಸುವ ಕೆಲಸ ಮುಂದುವರಿಸಿದೆ. ವಿದೇಶಗಳಲ್ಲಿ ಭಯೋತ್ಪಾದನೆ ಬೆಂಬಲಿಸುವ ಮತ್ತು ತನ್ನದೇ ಜನರನ್ನು ದಮನಗೊಳಿಸುವ ಅಲ್ಲಿನ ಸರ್ಕಾರಕ್ಕೆ ಹಣದ ಹರಿವನ್ನು ತಡೆಯಲು ಅಮೆರಿಕ ಈ ಕ್ರಮ ಕೈಗೊಂಡಿದೆ’ ಎಂದು ವಿದೇಶಾಂಗ ಇಲಾಖೆ ಬುಧವಾರ ಹೇಳಿದೆ. ಕಾಂಚನ್ ಪಾಲಿಮರ್ಸ್ ಅಲ್‌ಕೆಮಿಕಲ್ ಸೊಲ್ಯುಷನ್ಸ್ ರಮ್ನಿಕ್‌ಲಾಲ್ ಎಸ್. ಗೋಸಾಲಿಯಾ ಕಂಪನಿ ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್ ಗ್ಲೋಬಲ್ ಇಂಡಸ್ಟ್ರೀಸ್ ಕೆಮಿಕಲ್ ಲಿಮಿಟೆಡ್ ಮತ್ತು ಪರ್ಸಿಸ್ಟೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ನಿರ್ಬಂಧಕ್ಕೆ ಒಳಗಾಗಿವೆ. ಭಾರತ ಅಲ್ಲದೆ ಯುಎಇ ಟರ್ಕಿ ಮತ್ತು ಇಂಡೊನೇಷ್ಯಾದ ಕೆಲವು ಕಂಪನಿಗಳ ಮೇಲೂ ಅಮೆರಿಕ ನಿರ್ಬಂಧ ಹೇರಿದೆ.