ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಫಲಿತಾಂಶ ತಿರುಚಿದ ಆರೋಪ: ತಾವು ತಪ್ಪಿತಸ್ಥ ಅಲ್ಲ ಎಂದ ಡೊನಾಲ್ಡ್ ಟ್ರಂಪ್‌

Published 4 ಆಗಸ್ಟ್ 2023, 2:16 IST
Last Updated 4 ಆಗಸ್ಟ್ 2023, 2:16 IST
ಅಕ್ಷರ ಗಾತ್ರ

ವಾಷಿಂಗ್ಟನ್: 2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಬದಲಾಯಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ತಾವು ಈ ಪ್ರಕರಣದಲ್ಲಿ ತಪ್ಪಿತಸ್ಥ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.

ವಾಷಿಂಗ್ಟನ್‌ ಡಿ.ಸಿಯ ಕೌಂಟ್‌ಡೌನ್‌ ಫೆಡರಲ್‌ ಕೋರ್ಟ್‌ನಲ್ಲಿ ಇಂಡೋ–ಅಮೆರಿಕನ್ ನ್ಯಾಯಾಧೀಶೆ ಮ್ಯಾಜಿಸ್ಟ್ರೇಟ್‌ ಮೋಕ್ಷಿಲಾ ಉಪಾಧ್ಯಾಯ ಅವರ ಮುಂದೆ ಹಾಜರಾದ ಟ್ರಂಪ್‌, ಈ ಪ್ರಕರಣದಲ್ಲಿ ತಾವು ತಪ್ಪಿತಸ್ಥರಲ್ಲ ಎಂದು ಹೇಳಿದ್ದಾರೆ.

ಪ್ರಕರಣದ ಬಗ್ಗೆ ಹೇಗೆ ಮನವಿ ಮಾಡುತ್ತೀರಿ ಎನ್ನುವ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌, ‘ನಾನು ತಪ್ಪಿತಸ್ಥನಲ್ಲ’ ಎಂದು ಹೇಳಿದರು. ಈ ವೇಳೆ ವಕೀಲರ ಗುಂಪು ಅವರನ್ನು ಸುತ್ತುವರಿದಿತ್ತು.

ಪ್ರಕರಣದಲ್ಲಿ ಟ್ರಂಪ್‌ ಅವರನ್ನು ಬಿಡುಗಡೆಗೊಳಿಸುವುದಾಗಿ ನುಡಿದ ನ್ಯಾಯಾಧೀಶರು, ಕೆಲವೊಂದು ಷರತ್ತುಗಳನ್ನು ವಿಧಿಸಿದರು. ಅಗತ್ಯ ಇದ್ದಾಗ ಕೋರ್ಟ್‌ಗೆ ಹಾಜರಾಗಬೇಕು ಎಂದು ಸೂಚಿಸಿದರು.

ಟ್ರಂಪ್‌ ಅವರ ಮುಂದಿನ ವಿಚಾರಣೆ ಆಗಸ್ಟ್‌ 28ರಂದು ನಿಗದಿಯಾಗಿದ್ದು, ಅಮೆರಿಕ ಜಿಲ್ಲಾ ನ್ಯಾಯಾಧೀಶೆ ತಾನ್ಯ ಚುಕ್ತನ್‌ ಮುಂದೆ ಹಾಜರಾಗಬೇಕು. ಆದರೆ ಖುದ್ದು ಹಾಜರಿಗೆ ವಿನಾಯಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT