ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಇಲ್ಲಿ ವಾರ್ಷಿಕ ಆರೋಗ್ಯ ತಪಾಸಣೆಗೆ ಒಳಗಾದರು. ಬಳಿಕ, ‘ನಾನು ಆರೋಗ್ಯವಾಗಿದ್ದೇನೆ. ಹೃದಯದ ಕಾರ್ಯ, ಅರಿವಿನ ಸಾಮರ್ಥ್ಯ ಚೆನ್ನಾಗಿದೆ’ ಎಂದು ಸ್ವತಃ ಶ್ಲಾಘಿಸಿಕೊಂಡರು.

ಶ್ವೇತಭವನದ ವೈದ್ಯರ ಪ್ರಕಾರ, 78 ವರ್ಷ ವಯಸ್ಸಿನ ಅಧ್ಯಕ್ಷ ಟ್ರಂಪ್ ಅವರ ಆರೋಗ್ಯ ತಪಾಸಣಾ ವರದಿ ವಾರಾಂತ್ಯದ ವೇಳೆಗೆ ಲಭ್ಯವಿರಲಿದೆ.

ಅಮೆರಿಕದ ಇತಿಹಾಸದಲ್ಲೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅತಿ ಹಿರಿಯ ಎಂಬ ಹಿರಿಮೆಗೆ ಪಾತ್ರರಾಗಿರುವ ಟ್ರಂಪ್, ರಾಷ್ಟ್ರೀಯ ಸೇನಾ ಆರೋಗ್ಯ ಕೇಂದ್ರದಲ್ಲಿ ಸುಮಾರು ಐದು ಗಂಟೆ ಇದ್ದರು. ‘ಬಹುಶಃ ನಾನು ಆರೋಗ್ಯವಾಗಿದ್ದೇನೆ’ ಎಂದು ತಪಾಸಣೆಯ ಬಳಿಕ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.