ವಾಷಿಂಗ್ಟನ್: ‘ಕೊರೊನಾ ಸೋಂಕಿಗೆ ಪ್ರಾಯೋಗಿಕ ಔಷಧದ ಚಿಕಿತ್ಸೆ ಪಡೆದ ನಂತರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದು, ನನಗೆ ‘ಸೂಪರ್‌ಮ್ಯಾನ್‘ ರೀತಿಯ ಅನುಭವವಾಗುತ್ತಿದೆ‘ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.

ಕೊರೊನಾದಿಂದ ಗುಣಮುಖರಾದ ನಂತರಪೆನ್ಸಿಲ್ವೇನಿಯಾದ ಜಾನ್ಸ್‌ಟೌನ್‌ನಲ್ಲಿ ನಡೆದ ಎರಡನೇ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಟ್ರಂಪ್, ಕಿಕ್ಕಿರಿದು ತುಂಬಿದ್ದ ಸಾರ್ವಜನಿಕರ ಎದುರು, ‘ಕೊರೊನಾ ಚಿಕಿತ್ಸೆ ನಂತರ ನನಗೆ ಸೂಪರ್ ಮ್ಯಾನ್‘ನಂತಹ ಅನುಭವವಾಗುತ್ತಿದೆ‘ ಎಂದು ಹೇಳಿದರು.

ಇದೇ ವೇಳೆ ಕೊರೊನಾಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಅವರು ಅಭಿನಂದನೆ ಸಲ್ಲಿಸಿದರು.

ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ, ಶ್ವೇತಭವನದ ವೈದ್ಯರು ಚುನಾವಣಾ ರ್‍ಯಾಲಿಗಳಲ್ಲಿ ಭಾಗವಹಿಸಬಹುದೆಂದು ಅನುಮತಿ ನೀಡಿದ್ದರು. ಇದಾದ ನಂತರ ಸೋಮವಾರದಿಂದ ಪ್ರಾಯೋಗಿಕವಾಗಿ ಫ್ಲೋರಿಡಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಟ್ರಂಪ್ ಭಾಗವಹಿಸಿದ್ದರು.

‘ನನಗೆ ತಿಳಿದಂತೆ ಉತ್ತಮ ಚಿಕಿತ್ಸೆ ಪಡೆದಿದ್ದೇನೆ. ಉತ್ತಮ ಅನುಭವವನ್ನೂ ಪಡೆದಿದ್ದೇನೆ. ಪ್ರತಿಕಾಯಗಳ ಬಗ್ಗೆ ನನಗೆ ಗೊತ್ತಿಲ್ಲ. ಆದರೂ ಅದನ್ನು ತೆಗೆದುಕೊಂಡೆ. ಒಟ್ಟಾರೆ ಈಗ ಸೂಪರ್‌ಮ್ಯಾನ್‌ನಂತಹ ಅನುಭವವಾಗುತ್ತಿದೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.