ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡೇನಿಯಲ್ ಪಿ. ಡ್ರಿಸ್ಕಾಲ್ ಅವರನ್ನು ತಮ್ಮ ಸೇನೆಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದಾಗಿ ಬುಧವಾರ ತಿಳಿಸಿದರು.

ಡೇನಿಯಲ್ ಪಿ. ಡ್ರಿಸ್ಕಾಲ್ ಅವರು ಮಾಜಿ ಸೈನಿಕ ಮತ್ತು ಇರಾಕ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ಅನುಭವವನ್ನು ಹೊಂದಿದ್ದಾರೆ.

‘ಡೇನಿಯಲ್, ಅಮೆರಿಕದ ಕಾರ್ಯಸೂಚಿ ಯಶಸ್ಸಿಗಾಗಿ ನಿರ್ಭೀತ ಮತ್ತು ನಿರಂತರ ಹೋರಾಟ ನಡೆಸಲಿದ್ದಾರೆ’ ಎಂದು ಟ್ರಂಪ್ ಅವರು ತಮ್ಮ ಸಾಮಾಜಿಕ ತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಯೇಲ್ನಲ್ಲಿ ಪದವಿ ಪಡೆದ ಡೇನಿಯಲ್, ಸೈನ್ಯದಲ್ಲಿ ಕೆಲಸ ಮಾಡಿ, ನಂತರ ಉತ್ತರ ಕೆರೊಲಿನಾದಲ್ಲಿ ಹಲವಾರು ಹೂಡಿಕೆ ಬ್ಯಾಂಕುಗಳು ಮತ್ತು ಸಲಹಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

ಲೆಫ್ಟಿನೆಂಟ್ ಅಧಿಕಾರಿಯಾಗಿದ್ದಾಗ ಡೇನಿಯಲ್ ನಿವೃತ್ತಿ ಘೋಷಿಸಿದ್ದರು. ಸೇನಾ ಕಮಾಂಡರ್ ಪದಕ ಸೇರಿದಂತೆ ಅನೇಕ ಮಿಲಿಟರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.