ಸ್ಯಾನ್ ಫ್ರಾನ್ಸಿಸ್ಕೊ: ಜೋ ಬಿಡೆನ್, ಬರಾಕ್ ಒಬಾಮ, ವಾರೆನ್ ಬಫೆಟ್ ಸೇರಿದಂತೆ ಹಲವು ಖ್ಯಾತನಾಮರ ಟ್ವಿಟರ್ ಖಾತೆಗಳು ಹ್ಯಾಕ್ ಆಗಿರುವುದಕ್ಕೆಪ್ರತಿಕ್ರಿಯಿಸಿರುವ ಟ್ವಿಟರ್ ಸಿಇಒ ನಮಗಿದು ಕಠಿಣ ದಿನವೆಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಟೆಸ್ಲಾ ಕಂಪನಿ ಸಿಇಒ ಎಲೋನ್ ಮಸ್ಕ್ ಸೇರಿದಂತೆ ಹಲವು ಖ್ಯಾತನಾಮರ ಟ್ವಿಟರ್ ಖಾತೆಗಳನ್ನು ಬಿಟ್‌ಕಾಯಿನ್ ದಂಧೆಕೋರರು ಬುಧವಾರ ರಾತ್ರಿ ಹ್ಯಾಕ್ ಮಾಡಿದ್ದರು.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಸಿಇಒ ಜಾಕ್ ಡಾರ್ಸೆಸಮಸ್ಯೆಗೆ ಕಾರಣಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಬಳಕೆದಾರರಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ.

'ಟ್ವಿಟರ್‌ನಲ್ಲಿ ನಮಗಿಂದು ಕಠಿಣ ದಿನವಾಗಿದೆ. ಏನು ಸಂಭವಿಸಿದೆಯೋ ಅದು ಆತಂಕಕಾರಿ ಎಂದು ನಾವೆಲ್ಲರೂ ಭಾವಿಸಿದ್ದೇವೆ. ನಾವು ಸಮಸ್ಯೆಯ ಕಾರಣಗಳನ್ನು ಹುಡುಕುತ್ತಿದ್ದೇವೆ. ನಿಖರವಾಗಿ ಏನಾಯಿತು ಎಂಬುದರ ಕುರಿತು ನಮಗೆ ತಿಳಿದ ಮೇಲೆ ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ' ಎಂದು ಜಾಕ್ ತಿಳಿಸಿದ್ದಾರೆ.

'ಹ್ಯಾಕ್ ಆಗಿದ್ದನ್ನು ನಾವು ಪರಿಶೀಲಿಸುವ ಸಮಯದಲ್ಲಿ ಟ್ವೀಟ್ ಮಾಡುವುದು, ಪಾಸ್‌ವರ್ಡ್ ಸೆಟ್ ಮಾಡುವುದು ಸೇರಿದಂತೆ ಖಾತೆಗೆ ಸಂಬಂಧಿಸಿದ ಇತರ ಕೆಲವು ಕಾರ್ಯಗಳನ್ನು ತಡೆಯಲಾಗಿತ್ತು, ಅವುಗಳನ್ನುನಾವೀಗಮುಂದುವರಿಸುತ್ತಿದ್ದೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು' ಎಂದು ಕಂಪನಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.