ಶಾಂಘೈ: ಚೀನಾದ ಆರ್ಥಿಕ ಕೇಂದ್ರ ಶಾಂಘೈ ಮೇಲೆ ಬುಧವಾರ ‘ಕೊ–ಮೇ’ ಚಂಡಮಾರುತ ಅಪ್ಪಳಿಸಿದ್ದು ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.

ಕರಾವಳಿ ಮತ್ತು ತಗ್ಗು ಪ್ರದೇಶಗಳಲ್ಲಿದ್ದ ಸುಮಾರು 2.83 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಶಾಂಘೈನ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ಮಾಡುವ ಹಲವು ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ.

ಹಡಗು, ದೋಣಿ ಸೇವೆಗಳನ್ನು ರದ್ದುಪಡಿಸಲಾಗಿದೆ. ಮೆಟ್ರೊ ಸೇರಿದಂತೆ ರೈಲ್ವೆ ಸಂಚಾರಕ್ಕೆ ಕೆಲವೆಡೆ ವ್ಯತ್ಯಯವಾಗಿದೆ. ಹೆದ್ದಾರಿಗಳಲ್ಲಿ ವಾಹನಗಳ ವೇಗ ತಗ್ಲಿಸಲಾಗಿದೆ.

1900ಕ್ಕೂ ಹೆಚ್ಚು ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿ ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಬುಧವಾರ ಬೆಳಗ್ಗೆ ಝೆಜಿಂಗ್ಗೆ ಅಪ್ಪಳಿಸಿದ್ದ ಚಂಡಮಾರುತ ಗಂಟೆಗೆ 83 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿತ್ತು.

ಚೀನಾದ ಪೂರ್ವ ಕರಾವಳಿಯಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. ರಷ್ಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಚೀನಾದ ಪೂರ್ವ ಕರಾವಳಿಗೆ ಸುನಾಮಿಯ ಮುನ್ನೆಚ್ಚರಿಕೆ ನೀಡಿದ್ದ ಸರ್ಕಾರ ಆನಂತರ ವಾಪಸ್ ಪಡೆದಿದೆ.

ಶಾಂಘೈನ ಲೆಗೋಲ್ಯಾಂಡ್ ಮತ್ತು ಡಿಸ್ನಿಲ್ಯಾಂಡ್ ಬುಧವಾರ ಎಂದಿನಂತೆ ಬಾಗಿಲು ತೆರೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.