ಲಂಡನ್ (ಎಎಫ್ಪಿ, ರಾಯಿಟರ್ಸ್): ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ಪ್ರಕ್ರಿಯೆ ಸೋಮವಾರ ಆರಂಭವಾಯಿತಲ್ಲದೇ, ತಡರಾತ್ರಿವರೆಗೂ ಮುಂದುವರಿಯಿತು.

ಪ್ರಧಾನಿ ಪಟ್ಟ ಉಳಿಸಿಕೊಳ್ಳಲು ಜಾನ್ಸನ್ ಅವರಿಗೆ ಒಟ್ಟು 359 ಮತಗಳಲ್ಲಿ 180 ಮತಗಳು ಬೇಕು. ಒಂದು ವೇಳೆ ಜಾನ್ಸನ್ ಅವರು ಅಧಿಕಾರ ಕಳೆದುಕೊಂಡರೆ, ಬ್ರಿಟನ್ ಸಂಪುಟದ ಸಚಿವ ರಿಷಿ ಸುನಕ್ ಅವರು ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಯಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯ, ಅನೇಕ ಹಗರಣಗಳಿಂದಾಗಿ ಪಕ್ಷದ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಜಾನ್ಸನ್ ಅವರು ಈ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ. ಅದರಲ್ಲೂ, ‘ಪಾರ್ಟಿಗೇಟ್’ ವಿವಾದವು ಅವರ ಪ್ರಧಾನಿ ಸ್ಥಾನಕ್ಕೆ ಕುತ್ತಾಗಿ ಪರಿಣಿಮಿಸಿದೆ. ಹಾಗಾಗಿ, ಪಕ್ಷದ ಸದಸ್ಯರೇ ಜಾನ್ಸನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.