ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ನಲ್ಲಿ ಪತ್ನಿ ಅಕ್ಷತಾ ಷೇರು: ವಿಪಕ್ಷದಿಂದ ಸುನಕ್‌ಗೆ ಪ್ರಶ್ನೆ

ಭಾರತ–ಬ್ರಿಟನ್‌ ನಡುವೆ ‘ಮುಕ್ತ ವ್ಯಾಪಾರ ಒಪ್ಪಂದ’
Published 27 ಆಗಸ್ಟ್ 2023, 15:46 IST
Last Updated 27 ಆಗಸ್ಟ್ 2023, 15:46 IST
ಅಕ್ಷರ ಗಾತ್ರ

ಲಂಡನ್(ಪಿಟಿಐ): ಭಾರತ ಮತ್ತು ಬ್ರಿಟನ್‌ ನಡುವಿನ ‘ಮುಕ್ತ ವ್ಯಾಪಾರ ಒಪ್ಪಂದ’ (ಎಫ್‌ಟಿಎ) ಅಂತಿಮಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇನ್ನೊಂದೆಡೆ, ಪತ್ನಿ ಅಕ್ಷತಾ ಮೂರ್ತಿ ಅವರು ಇನ್ಫೊಸಿಸ್‌ ಕಂಪನಿ ಷೇರುಗಳನ್ನು ಹೊಂದಿರುವ ವಿಚಾರವಾಗಿ ಪ್ರಧಾನಿ ರಿಷಿ ಸುನಕ್‌ ಅವರಿಗೆ ವಿರೋಧ ಪಕ್ಷವು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.

ಎಫ್‌ಟಿಎ ಸೇರಿದಂತೆ ಉಭಯ ದೇಶಗಳ ನಡುವಿನ ವ್ಯಾಪಾರಕ್ಕೆ ಸಂಬಂಧಿಸಿ ಏರ್ಪಡುವ ಯಾವುದೇ ಒಪ್ಪಂದದಿಂದ ಇನ್ಫೊಸಿಸ್‌ಗೂ ಲಾಭವಾಗಲಿದೆ. ಹೀಗಾಗಿ, ವಾಣಿಜ್ಯ ಕ್ಷೇತ್ರದ ತಜ್ಞರು ಕೂಡ ಇದೇ ವಿಷಯವಾಗಿ ಸುನಕ್‌ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ‘ದಿ ಆಬ್ಸರ್ವರ್’ ನಿಯತಕಾಲಿಕೆ ವರದಿ ಮಾಡಿದೆ.

ಬೆಂಗಳೂರು ಮೂಲದ ಇನ್ಫೊಸಿಸ್‌ನ ಸಹಸಂಸ್ಥಾಪಕ ನಾರಾಯಣಮೂರ್ತಿ ಪುತ್ರಿಯಾಗಿರುವ ಅಕ್ಷತಾ ಅವರು ಹೊಂದಿರುವ ಕಂಪನಿಯ ಷೇರುಗಳ ಮೌಲ್ಯ ಅಂದಾಜು ₹ 5 ಸಾವಿರ ಕೋಟಿ. ಒಪ್ಪಂದದ ಹಿನ್ನೆಲೆಯಲ್ಲಿ ಆಗುವ ವಿತ್ತೀಯ ಪರಿಣಾಮ ಕುರಿತ ಸಮಗ್ರ ಮಾಹಿತಿ ಬಹಿರಂಗಪಡಿಸಬೇಕು ಎಂದು ಲೇಬರ್‌ ಪಾರ್ಟಿ ಸಂಸದ ಡರೆನ್ ಜೋನ್ಸ್‌ ಹೇಳಿದ್ದಾರೆ.

‘ಇನ್ಫೊಸಿಸ್‌ ಕಂಪನಿಯು ಬ್ರಿಟನ್‌ ಸರ್ಕಾರ ಹಾಗೂ ದೇಶದ ಹಲವಾರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವೀಸಾ ನಿಯಮಗಳಲ್ಲಿ ಬದಲಾವಣೆ ತರಬೇಕು ಎಂದು ಬಯಸುತ್ತಿದೆ. ಇದರಿಂದ ಐ.ಟಿ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ದುಡಿಯುವ ತನ್ನ ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವನ್ನು ಕಂಪನಿ ಹೊಂದಿದೆ’ ಎಂದು ‘ದಿ ಆಬ್ಸರ್ವರ್’ ವರದಿ ಮಾಡಿದೆ.

ಎಫ್‌ಟಿಎ ಕುರಿತು 12ನೇ ಸುತ್ತಿನ ಮಾತುಕತೆ ನಡೆಯಬೇಕಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಸುನಕ್‌ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ, ಈ ವಿಚಾರ ಬ್ರಿಟನ್‌ನಲ್ಲಿ ಮುನ್ನೆಲೆಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT