ನ್ಯೂಯಾರ್ಕ್: ಯುದ್ಧ ಪೀಡಿತಉಕ್ರೇನ್ನ ಸ್ಫೂರ್ತಿ ಎಂದೇ ಪರಿಗಣಿಸಲ್ಪಟ್ಟಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಟೈಮ್ 2022ರ ಸಾಲಿನ ‘ವರ್ಷದ ವ್ಯಕ್ತಿ’ಎಂದು ಬುಧವಾರ ಘೋಷಿಸಲಾಗಿದೆ.

‘44 ವರ್ಷದ ಝೆಲೆನ್ಸ್ಕಿ ಅವರನ್ನು ಉಕ್ರೇನ್ ಮತ್ತು ವಿದೇಶಗಳಲ್ಲಿ ಅನೇಕರು ‘ಹೀರೊ’ ಆಗಿ ಗುರುತಿಸಿದ್ದಾರೆ. ಪ್ರಜಾಪ್ರಭುತ್ವ ಮತ್ತು ದೇಶ ರಕ್ಷಣೆಯ ಪ್ರತೀಕವಾಗಿ ಅವರು ನಿಂತಿದ್ದಾರೆ. ರಷ್ಯಾದ ಅಪ್ರಚೋದಿತ ದಾಳಿಯ ವಿರುದ್ಧ ದೇಶದ ಹೋರಾಟವನ್ನು ಅವರು ಮುನ್ನಡೆಸುತ್ತಿದ್ದಾರೆ. ಅವರು ವರ್ಷದ ವ್ಯಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ’ ಎಂದು ಟೈಮ್ ವಾಹಿನಿ ಟ್ವೀಟ್ ಮಾಡಿದೆ.

ಕಳೆದ ವರ್ಷ ಈ ಗೌರವ ಜಗತ್ತಿನ ಆಗರ್ಭ ಸಿರಿವಂತ, ಅಮೆರಿಕದ ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಸಿಇಒ ಇಲಾನ್ ಮಸ್ಕ್ ಅವರಿಗೆ ಸಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.