ಕಳೆದ 10 ದಶಕಗಳಲ್ಲಿ ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷರೊಬ್ಬರು ಅಮೆರಿಕ ಪ್ರವಾಸ ಕೈಗೊಂಡಿದ್ದರು. ಪುಟಿನ್ ಅವರಿಗೆ ಅಲಾಸ್ಕದಲ್ಲಿ ಕೆಂಪುಹಾಸಿನ ಸ್ವಾಗತವನ್ನೂ ಕೋರಲಾಗಿತ್ತು. ಆದರೂ ಯುದ್ಧ ಅಂತ್ಯಗೊಳಿಸುವ ಸಂಬಂಧ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ‘ಆದರೆ, ಮುಂದಿನ ಮಾತುಕತೆಯು ರಷ್ಯಾದಲ್ಲಿ ಆಗಬೇಕು’ ಎಂದು ಪುಟಿನ್ ಹೇಳಿದ್ದಾರೆ.