ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ–ಉಕ್ರೇನ್ ಕದನ ವಿರಾಮ: ಪುಟಿನ್ ಷರತ್ತು ತಿರಸ್ಕರಿಸಿದ ಝೆಲೆನ್‌ಸ್ಕಿ

Published 14 ಜೂನ್ 2024, 14:19 IST
Last Updated 14 ಜೂನ್ 2024, 14:19 IST
ಅಕ್ಷರ ಗಾತ್ರ

ಮಾಸ್ಕೊ: ‘ರಷ್ಯಾದ ಪೂರ್ವ ಹಾಗೂ ದಕ್ಷಿಣದಲ್ಲಿ ಜಮಾವಣೆಗೊಂಡಿರುವ ತನ್ನ ಸೇನೆಯನ್ನು ಹಿಂಪಡೆದು ಶರಣಾದಲ್ಲಿ ಹಾಗೂ ನ್ಯಾಟೊ ಸದಸ್ಯತ್ವದಿಂದ ಹಿಂದೆ ಸರಿದಲ್ಲಿ ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗೆ ಸಿದ್ಧ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಹೇಳಿದ್ದಾರೆ.

ಆದರೆ ಈ ಪ್ರಸ್ತಾವನೆಯನ್ನು ಉಕ್ರೇನ್‌ ತಿರಸ್ಕರಿಸಿದೆ. ರಷ್ಯಾ ನಂಬಿಕೆಗೆ ಅರ್ಹವಲ್ಲದ ರಾಷ್ಟ್ರ. ಕದನ ವಿರಾಮ ಘೋಷಿಸಿದ ಮೇಲೂ ತನ್ನ ವಿರುದ್ಧ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಉಕ್ರೇನ್ ಹೇಳಿದೆ.

2022ರ ಫೆಬ್ರುವರಿಯಿಂದ ಆರಂಭಗೊಂಡ ರಷ್ಯಾ–ಉಕ್ರೇನ್ ನಡುವಿನ ಯುದ್ಧ ಕೊನೆಗಾಣಿಸಲು ಪುಟಿನ್ ಈಗ ಷರತ್ತುಗಳನ್ನು ವಿಧಿಸಿದ್ದಾರೆ. ರಷ್ಯಾದ ದಾಳಿಯನ್ನು ವಿರೋಧಿಸಿ ಜಗತ್ತಿನ ವಿವಿಧೆಡೆ ನಡೆಯುತ್ತಿರುವ ಜಾಗತಿಕ ಶೃಂಗಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವ  ವೊಲೊಡಿಮಿರ್‌  ಝೆಲೆನ್‌ಸ್ಕಿ,  ವಿಶ್ವದ  ನಾಯಕರ ಬೆಂಬಲ ಕೋರುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಉಕ್ರೇನ್ ರಾಜಧಾನಿ ಕೀವ್‌ ಮೇಲೆ ದಾಳಿ ನಡೆಸಿದ ನಂತರ ಒಂದು ಬಾರಿಯೂ ಉಭಯ ರಾಷ್ಟ್ರಗಳ ನಡುವೆ ಶಾಂತಿಯ ಮಾತುಕತೆ ನಡೆದಿಲ್ಲ. ಮಾತುಕತೆಗೂ ಮುನ್ನ ಉಭಯ ರಾಷ್ಟ್ರಗಳ ನಡುವಿನ ಅಂತರರಾಷ್ಟ್ರೀಯ ಗಡಿರೇಖೆಯಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ರಷ್ಯಾಗೆ ಉಕ್ರೇನ್ ತಾಕೀತು ಮಾಡಿದೆ.

‘ಗಡಿರೇಖೆಯಲ್ಲಿರುವ ಉಕ್ರೇನ್ ಸೇನೆಯನ್ನು ಹಿಂದಕ್ಕೆ ಪಡೆದ ತಕ್ಷಣ ಹಾಗೂ ನ್ಯಾಟೊದಿಂದ ತನ್ನ ಸದಸ್ಯತ್ವ ಹಿಂಪಡೆದ ಮರುಕ್ಷಣವೇ ಕದನವಿರಾಮ ಘೋಷಿಸಲಾಗುವುದು ಹಾಗೂ ಮಾತುಕತೆ ನಡೆಸಲಾಗುವುದು. ಇಲ್ಲವಾದಲ್ಲಿ, ತನ್ನ ಗುರಿ ಮುಟ್ಟುವವರೆಗೂ ರಷ್ಯಾ ತನ್ನ ಸೇನಾ ಕಾರ್ಯಾಚರಣೆಯನ್ನು ಪೂರ್ಣ ಪ್ರಮಾಣದಲ್ಲಿ ಮುಂದುವರಿಸಲಿದೆ’ ಎಂದು ಪುಟಿನ್ ಹೇಳಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT