ಸಾಲ್ವಡಾರ್: ವಾರದಿಂದ ಅಮೆಜಾನ್ ಮಳೆಕಾಡು ಹೊತ್ತಿ ಉರಿಯುತ್ತಿದ್ದು, ಕಾಡನ್ನು ಸಂರಕ್ಷಿಸಬೇಕಾಗಿದೆ ಎಂದು ಫ್ರಾನ್ಸ್ ಹಾಗೂ ವಿಶ್ವಸಂಸ್ಥೆ ಗುರುವಾರ ಹೇಳಿದೆ.

‘ನಮ್ಮ ಮನೆಗೆ ಬೆಂಕಿ ಬಿದ್ದಿದೆ. ಜಗತ್ತಿಗೆ ಶೇ 20ರಷ್ಟು ಆಮ್ಲಜನಕ ನೀಡುವ, ಭೂಮಿಯ ಶ್ವಾಸಕೋಶವಾಗಿರುವ ಅಮೆಜಾನ್ ಕಾಡು ಇಂದು ಹೊತ್ತಿ ಉರಿಯುತ್ತಿದೆ’ ಎಂದು ಫ್ರಾನ್ಸ್ ಅಧ್ಯಕ್ಷ್ಯ ಎಮ್ಯಾನ್ಯುಯೆಲ್ ಮೇಕ್ರನ್ ಟ್ವೀಟ್ ಮಾಡಿದ್ದಾರೆ.

‘ಇದೊಂದು ಅಂತರರಾಷ್ಟ್ರೀಯ ಬಿಕ್ಕಟ್ಟು. ’ಜಿ7‘ನ ಸದಸ್ಯರು ಈ ತುರ್ತು ಪರಿಸ್ಥಿತಿಯ ಕುರಿತು ನಾವು ಎರಡು ದಿನ ಚರ್ಚೆ ನಡೆಸಬೇಕು’ ಎಂದೂ ಹೇಳಿದರು. ಫ್ರಾನ್ಸ್ ಅಧ್ಯಕ್ಷರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ, ‘ಫ್ರಾನ್ಸ್ ಅಧ್ಯಕ್ಷರು ವಸಾಹತುಶಾಹಿ ಮನಃಸ್ಥಿತಿ ಹೊಂದಿದ್ದಾರೆ’ ಎಂದು ಆರೋಪಿಸಿದರು.

‘ಅಮೆಜಾನ್ ಸುತ್ತಮುತ್ತಲ ಪ್ರದೇಶದ ಭಾಗವಹಿಸುವಿಕೆ ಇಲ್ಲದೆ, ಫ್ರಾನ್ಸ್ ಅಧ್ಯಕ್ಷರು, ಜಿ7 ಸಭೆಯಲ್ಲಿ ಅಮೆಜಾನ್ ಬಗ್ಗೆ ಮಾತನಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದು ವಸಾಹತುಶಾಹಿ ಮನಃಸ್ಥಿತಿ ಆಗಿದೆ. ಈ ಮನಃಸ್ಥಿತಿ 21ನೇ ಶತಮಾನಕ್ಕೆ ಹೊಂದುವುದಿಲ್ಲ’ ಎಂದು ಬ್ರೆಜಿಲ್ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ. ಅಮೆಜಾನ್ ಪ್ರದೇಶದಲ್ಲಿ ನಡೆಯುತ್ತಿರುವ ತೀವ್ರ ತರವಾದ ಅರಣ್ಯನಾಶದಿಂದಲೇ ಕಾಡಿಗೆ ಬೆಂಕಿ ತಗುಲಿದೆ ಎಂದು ಪರಿಸರ ತಜ್ಞರು ಹೇಳುತ್ತಿದ್ದಾರೆ.

‘ಬರಗಾಲ ಹೆಚ್ಚಿರುವುದರಿಂದ ಬೆಂಕಿ ಹತ್ತಿಕೊಂಡಿದೆ. ಬ್ರೆಜಿಲ್‌ನ ಆರ್ಥಿಕ ಹಿತಾಸಕ್ತಿ ಹಾಳುಮಾಡಲು, ಪರಿಸರ ತಜ್ಞರು ಹಾಗೂ ಎನ್‌ಜಿಒಗಳು ’ಪರಿಸರ ಮನೋರೋಗ’ವನ್ನು ಹಬ್ಬಿಸುತ್ತಿದ್ದಾರೆ ಎಂದು ಬ್ರೆಜಿಲ್ ಅಧ್ಯಕ್ಷ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.