ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿಯದ ಬೆನ್ನಲ್ಲೇ, ಅಮೆರಿಕ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕ ಹೇರುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಹಿ ಹಾಕಿದ್ದಾರೆ.

ವಿನಾಯಿತಿ ಪಟ್ಟಿಯಲ್ಲಿರುವ ಕೆಲ ಸರಕುಗಳನ್ನು ಹೊರತುಪಡಿಸಿದಂತೆ, ಭಾರತದ ಮೇಲೆ ಹೇರಲಾದ ಸುಂಕದ ಪ್ರಮಾಣ ಶೇ 50ಕ್ಕೆ ಏರಿದಂತಾಗಿದೆ. ಟ್ರಂಪ್ ಅವರ ಈ ನಡೆಯು, ಜವಳಿ, ಸಾಗರ ಹಾಗೂ ಚರ್ಮ ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಭಾರತದಿಂದ ಅಮೆರಿಕಕ್ಕೆ ₹7.5 ಲಕ್ಷ ಕೋಟಿ (86 ಶತಕೋಟಿ ಡಾಲರ್) ಮೌಲ್ಯದಷ್ಟು ಸರಕುಗಳ ರಫ್ತು ಆಗುತ್ತದೆ. ಹೆಚ್ಚುವರಿ ಸುಂಕ ಈ ರಫ್ತಿನ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತವು, ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾಕ್ಕೆ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಟ್ರಂಪ್ ದೂರಿದ್ದಾರೆ.

ಈ ಹಿಂದೆ ಭಾರತದಿಂದ ಆಮದು ಮಾಡಿಕೊಳ್ಳಲಾಗುವ ಸರಕುಗಳ ಮೇಲೆ ಹೇರಿದ್ದ ಶೇ 25ರಷ್ಟು ಸುಂಕವು ಆ.7ರಿಂದ ಜಾರಿಗೆ ಬರಲಿದೆ. ಇದು ಜಾರಿಯಾಗಲು ಇನ್ನೂ 14 ಗಂಟೆ ಬಾಕಿ ಇರುವಾಗಲೇ, ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ಹೇರಲಾಗಿದೆ.

ಹೆಚ್ಚುವರಿ ಸುಂಕವು 21 ದಿನಗಳಲ್ಲಿ ಅಥವಾ ಆಗಸ್ಟ್ 27ರಿಂದ ಜಾರಿಗೆ ಬರಲಿದೆ. ಇದು ಉಕ್ಕು, ಅಲ್ಯುಮಿನಿಯಂ ಸರಕುಗಳಿಗೆ ಅನ್ವಯಿಸುವುದಿಲ್ಲ. ಔಷಧ ವಲಯ ಹೆಚ್ಚುವರಿ ಸುಂಕ ನೀತಿಯಡಿ ಬರಲಿದೆ.

ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಅಮೆರಿಕದ ನಿಲುವು ‘ನ್ಯಾಯಸಮ್ಮತವಲ್ಲ’ ಎಂದು ಭಾರತ ಮಂಗಳವಾರ ತಿರುಗೇಟು ನೀಡಿತ್ತು.

ಭಾರತ ತನ್ನ ಬೇಡಿಕೆಯ ಪೈಕಿ ಶೇ 88ರಷ್ಟು ಕಚ್ಚಾ ತೈಲವನ್ನು ವಿವಿಧ ರಾಷ್ಟ್ರಗಳಿಂದ ಖರೀದಿಸುತ್ತದೆ. 2021ರ ವರೆಗೆ ರಷ್ಯಾದಿಂದ ಖರೀದಿಸಿದ ತೈಲ ಪ್ರಮಾಣ ಶೇ 0.2ರಷ್ಟಾಗುತ್ತದೆ. ಉಕ್ರೇನ್ ಮೇಲೆ ಯುದ್ಧ ಸಾರಿದ ನಂತರ, ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡಲು ಆರಂಭಿಸಿದೆ. ಭಾರತದ ತೈಲ ಸಂಸ್ಕರಣಾ ಕಂಪನಿಗಳು ಈ ಅವಕಾಶವನ್ನು ತಡಮಾಡದೇ ಬಳಸಿಕೊಂಡಿವೆ. ಪ್ರಸ್ತುತ ರಷ್ಯಾ, ಭಾರತಕ್ಕೆ ತೈಲ ಪೂರೈಸುವ ಪ್ರಮುಖ ರಾಷ್ಟ್ರವಾಗಿದೆ.
.24 ಗಂಟೆಗಳಲ್ಲಿ ಭಾರತದ ಸರಕುಗಳ ಮೇಲಿನ ಸುಂಕ ಮತ್ತಷ್ಟು ಏರಿಕೆ: ಟ್ರಂಪ್.ಭಾರತದ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ: ರಷ್ಯಾ ಖಂಡನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.