ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2ನೇ ವಿಶ್ವಯುದ್ಧದಲ್ಲಿ ಎಸೆದಿದ್ದ ಬಾಂಬ್‌ ಈಗ ಸ್ಫೋಟ!

Published : 2 ಅಕ್ಟೋಬರ್ 2024, 14:07 IST
Last Updated : 2 ಅಕ್ಟೋಬರ್ 2024, 14:07 IST
ಫಾಲೋ ಮಾಡಿ
Comments

ಟೋಕಿಯೊ: ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಸ್ಫೋಟಗೊಳ್ಳದೆ ಭೂಮಿಯಲ್ಲಿ ಹುದುಗಿಹೋಗಿದ್ದ ಅಮೆರಿಕದ ಬಾಂಬ್‌, ಜಪಾನ್‌ನ ವಿಮಾನ ನಿಲ್ದಾಣದ ಸಮೀಪ ಬುಧವಾರ ಸ್ಫೋಟಗೊಂಡಿದೆ. ಅದೃಷ್ಟವಶಾತ್‌ ಯಾರೊಬ್ಬರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಟ್ಯಾಕ್ಸಿ ನಿಲುಗಡೆ ಜಾಗವು ಹಾನಿಗೊಳಗಾಗಿದೆ ಮತ್ತು 80ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದರು.

‘ನೈಋತ್ಯ ಜಪಾನ್‌ನ ಮಿಯಾಜಾಕಿ ವಿಮಾನ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದಾಗ ಸ್ಥಳದ ಸಮೀಪ ಯಾವುದೇ ವಿಮಾನ ಇರಲಿಲ್ಲ’ ಎಂದು ಸಾರಿಗೆ ಸಚಿವಾಲಯದ ಅಧಿಕಾರಿಗಳು ತಿಳಿಸಿದರು.

500–ಪೌಂಡ್ ಅಮೆರಿಕ ಬಾಂಬ್‌ನಿಂದ ಸ್ಫೋಟ ಸಂಭವಿಸಿದೆ. ಭವಿಷ್ಯದಲ್ಲಿ ಇದರಿಂದ ಅಪಾಯ ಇಲ್ಲ. ಆದರೆ ತತ್‌ಕ್ಷಣ ಸ್ಫೋಟಕ್ಕೆ ಕಾರಣ ಏನೆಂದು ಪತ್ತೆ ಮಾಡಲಾಗುತ್ತಿದೆ ಎಂದು ಸ್ವಯಂ ರಕ್ಷಣಾ ದಳ ಮತ್ತು ಪೊಲೀಸರ ತನಿಖೆಯು ತಿಳಿಸಿದೆ ಎಂದು ಹೇಳಿದರು.

ವಿಮಾನಗಳ ಹಾರಾಟವು ಗುರುವಾರ ಬೆಳಿಗ್ಗೆಯಿಂದ ಮರು ಆರಂಭವಾಗಲಿದೆ ಎಂದು ಸಂಪುಟದ ಮುಖ್ಯ ಕಾರ್ಯದರ್ಶಿ ಯೋಶಿಮಾಸ ಹಯಾಶಿ ಅವರು ತಿಳಿಸಿದರು.

ಎರಡನೇ ವಿಶ್ವಯುದ್ಧ ಸಂದರ್ಭದಲ್ಲಿ ಅಮೆರಿಕ ಸೇನೆ ಎಸೆದಿದ್ದ ಅನೇಕ ಬಾಂಬ್‌ಗಳು ಸ್ಫೋಟಗೊಳ್ಳದೆ ಜಪಾನ್‌ನ ಭೂಮಿಯಲ್ಲಿ ಹುದುಗಿವೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT