ಮೆನ್ಲೊ ಪಾರ್ಕ್ (ಅಮೆರಿಕ):ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಸೃಷ್ಟಿಸಲಾಗಿದ್ದ ಒಟ್ಟು 276 ನಕಲಿ ಖಾತೆಗಳನ್ನು ಫೇಸ್ಬುಕ್ ಗುರುವಾರ ರದ್ದುಪಡಿಸಿದೆ.

‘ಈ ಖಾತೆಗಳ ಮೂಲಕ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರವಾದ ನಿಲುವುಗಳನ್ನು ಅಭಿವ್ಯಕ್ತಿಗೊಳಿಸಲಾಗುತ್ತಿತ್ತು. ಈ ಖಾತೆಗಳನ್ನು ತೆರೆದಿದ್ದ ಅರಿಜೊನಾ ಮೂಲದ ರ್ಯಾಲಿ ಫೋರ್ಜ್ ಎಂಬ ಡಿಜಿಟಲ್ ಸಂವಹನ ಸಂಸ್ಥೆಯನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ’ ಎಂದು ಫೇಸ್ಬುಕ್ ತಿಳಿಸಿದೆ.

’ಟರ್ನಿಂಗ್ ಪಾಯಿಂಟ್ ಆ್ಯಕ್ಷನ್’ ಸಂಸ್ಥೆಯು ಟ್ರಂಪ್ ಪರವಾದ ಸಂದೇಶಗಳು ಹಾಗೂ ಪೋಸ್ಟ್ಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲು ಯುವ ಸಮುದಾಯವನ್ನು ಬಳಸಿಕೊಳ್ಳುತ್ತಿದೆ. ಅದಕ್ಕಾಗಿ ಅವರಿಗೆ ಹಣವನ್ನೂ ಕೊಡುತ್ತಿದೆ. ಇದು ಫೇಸ್ಬುಕ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ಕಳೆದ ತಿಂಗಳು ಸುದ್ದಿ ಪ್ರಕಟಿಸಿತ್ತು.

ಈಗ ಫೇಸ್ಬುಕ್ನಿಂದ ನಿಷೇಧಕ್ಕೊಳಗಾಗಿರುವ ರ್ಯಾಲಿ ಫೋರ್ಜ್ ಸಂಸ್ಥೆ 2018ರ ಮಧ್ಯಂತರ ಚುನಾವಣೆಗೂ ಮುಂಚಿನಿಂದಲೇ ಕಾರ್ಯಪ್ರವೃತ್ತವಾಗಿತ್ತು. ನಕಲಿ ಖಾತೆಗಳ ಮೂಲಕ ಡೆಮಾಕ್ರಟಿಕ್ ಪಕ್ಷ ಹಾಗೂ ಅದರ ಅಭ್ಯರ್ಥಿಗಳನ್ನು ಟೀಕಿಸುವ ಮತ್ತು ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದವರನ್ನು ಪ್ರಶಂಸಿಸುವಂತಹ ಪೋಸ್ಟ್ಗಳನ್ನು ಪ್ರಕಟಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.