ನವದೆಹಲಿ: ವಿವಿಧ ದೇಶಗಳ ಮೇಲೆ ಪ್ರತಿಸುಂಕ ವಿಧಿಸುವುದನ್ನು ಅಮಾನತಿನಲ್ಲಿ ಇರಿಸಿದ ಕ್ರಮವನ್ನು ಅಮೆರಿಕವು ಆಗಸ್ಟ್ 1ರವರೆಗೆ ವಿಸ್ತರಿಸಿದೆ. ಇದು ಭಾರತದಲ್ಲಿ ರಫ್ತು ವಹಿವಾಟಿನಲ್ಲಿ ತೊಡಗಿರುವವರಿಗೆ ಸಮಾಧಾನ ತಂದಿದೆ.

ಅಲ್ಲದೆ, ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ ನೀಡಲು ಭಾರತ ಮತ್ತು ಅಮೆರಿಕದ ಅಧಿಕಾರಿಗಳಿಗೆ ಇದು ತುಸು ಹೆಚ್ಚುವರಿ ಸಮಯಾವಕಾಶ ನೀಡಿದೆ.

ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಕೆಲವು ದೇಶಗಳಿಗೆ ಸುಂಕದ ಪತ್ರವನ್ನು ಸೋಮವಾರ ರವಾನಿಸಿದೆ. ಟ್ರಂಪ್ ಅವರ ಸಹಿ ಇರುವ ಪತ್ರವನ್ನು ಬಾಂಗ್ಲಾದೇಶ, ಇಂಡೊನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ಥಾಯ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ರವಾನಿಸಲಾಗಿದೆ. ಆದರೆ, ಈ ಪಟ್ಟಿಯಲ್ಲಿ ಭಾರತ ಇಲ್ಲ.

ಟ್ರಂಪ್ ಅವರು ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಪ್ರತಿಸುಂಕ ವಿಧಿಸುವುದಾಗಿ ಏಪ್ರಿಲ್ 2ರಂದು ಪ್ರಕಟಿಸಿದರು. ಅವರು ಭಾರತದ ಮೇಲೆ ಶೇ 26ರಷ್ಟು ಸುಂಕ ವಿಧಿಸಿದ್ದರು. ಆದರೆ ಇದನ್ನು ಜಾರಿಗೆ ತರುವುದನ್ನು 90 ದಿನಗಳವರೆಗೆ ಮುಂದೂಡಿದರು. ಅಮೆರಿಕದ ಜೊತೆ ವಾಣಿಜ್ಯ ವಹಿವಾಟು ಹೊಂದಿರುವ ದೇಶಗಳಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಅವರು ಈ ಮೂಲಕ ಜುಲೈ 9ರವರೆಗೆ ಅವಕಾಶ ಕಲ್ಪಿಸಿದರು.

ಪ್ರತಿಸುಂಕ ವಿಧಿಸುವ ನಿರ್ಧಾರವು ಜುಲೈ 9ರ ಬದಲು ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕ ಹೇಳಿರುವುದು, ಆ ದೇಶವು ಬೇರೆ ಬೇರೆ ದೇಶಗಳ ಜೊತೆ ವ್ಯಾಪಾರ ಒಪ್ಪಂದದ ವಿಚಾರವಾಗಿ ರಚನಾತ್ಮಕ ಮಾತುಕತೆಗೆ ಸಿದ್ಧವಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ರಫ್ತು ವಹಿವಾಟುದಾರರು ಅಭಿಪ್ರಾಯಪಟ್ಟಿದ್ದಾರೆ.

‘ಪ್ರತಿಸುಂಕ ಜಾರಿ ಮುಂದೂಡಿಕೆ ಆಗಿರುವುದು ಮಾತುಕತೆಗಳಿಗೆ ಇನ್ನಷ್ಟು ಸಮಯಾವಕಾಶ ನೀಡಿದೆ. ಮಾತುಕತೆಗಳಲ್ಲಿ ಭಾಗಿ ಆಗಿರುವವರು ಪರಿಹಾರ ಕಾಣದ ವಿಚಾರಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇದರಿಂದಾಗಿ ಸಹಾಯ ಆಗುತ್ತದೆ’ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್ಐಇಒ) ಮಹಾನಿರ್ದೇಶಕ ಅಜಯ್ ಸಹಾಯ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಏನು ಮಾಡುತ್ತಾರೆ ಎಂಬುದನ್ನು ಊಹಿಸುವುದು ಕಷ್ಟ. ಭಾರತವು ಹೊಸ ಮಾರುಕಟ್ಟೆಗಳನ್ನು ಹುಡುಕಿ ರಫ್ತು ವಹಿವಾಟು ಹೆಚ್ಚು ಮಾಡಬೇಕು
ಶರದ್ ಕುಮಾರ್ ಸರಾಫ್ ಮುಂಬೈಯ ರಫ್ತುದಾರ
.ಆಳ ಅಗಲ | ಟ್ರಂಪ್ ಪ್ರತಿಸುಂಕ ನೀತಿ; ಜಗದ ಆರ್ಥಿಕತೆಗೆ ಭಾರಿ ಹೊಡೆತ?.Tariff War:ಅಮೆರಿಕದ ಮೇಲೆ ಭಾರತದಿಂದ ಪ್ರತಿಸುಂಕ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.