ಐ.ಟಿ ಕಂಪನಿಗಳು ಎಚ್–1ಬಿ ವೀಸಾ ಸೌಲಭ್ಯವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡಿವೆ. ಇದು, ಕಂಪ್ಯೂಟರ್ ಆಧಾರಿತ ಕ್ಷೇತ್ರಗಳಲ್ಲಿ ದುಡಿಯುವ ಅಮೆರಿಕದ ಪ್ರಜೆಗಳಿಗೆ ಗಣನೀಯ ಹಾನಿ ಉಂಟುಮಾಡಿದೆ.
ಎಚ್1–ಬಿ ವೀಸಾ ಹೊಂದಿರುವವರು ಹಾಗೂ ಅವರ ಅವಲಂಬಿತರು ಅಮೆರಿಕದಿಂದ ಹೊರಗೆ ಹೋಗಬಾರದು. ತಮ್ಮ ಸ್ವಂತ ಅಥವಾ ಬೇರೆ ದೇಶಗಳಿಗೆ ಹೋಗಿರುವವರು ಸೆಪ್ಟೆಂಬರ್ 21ರ ಒಳಗಾಗಿ ಅಮೆರಿಕಕ್ಕೆ ಮರಳಬೇಕು ಎಂದು ಮೈಕ್ರೊಸಾಫ್ಟ್ ಕಂಪನಿಯು ಸಂಬಂಧಪಟ್ಟ ಉದ್ಯೋಗಿಗಳಿಗೆ ಇ–ಮೇಲ್ ಕಳುಹಿಸಿ, ಸೂಚನೆ ನೀಡಿದೆ.