ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್: ಅಮೆರಿಕದ ಶಸ್ತ್ರಾಸ್ತ್ರ ಪೂರೈಕೆ ನಿಷೇಧ ತೆರವು

Published 11 ಜೂನ್ 2024, 13:46 IST
Last Updated 11 ಜೂನ್ 2024, 13:46 IST
ಅಕ್ಷರ ಗಾತ್ರ

ಕೀವ್ (ಉಕ್ರೇನ್): ಉಕ್ರೇನ್‌ನ ವಿವಾದಿತ ಮಿಲಿಟರಿ ಘಟಕ ಅಜೊವ್ ಬ್ರಿಗೇಡ್‌ಗೆ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಪೂರೈಸುವುದಕ್ಕೆ ಹಾಗೂ ಅದಕ್ಕೆ ತರಬೇತಿ ನೀಡುವುದಕ್ಕೆ ಇದ್ದ ನಿಷೇಧವನ್ನು ಅಮೆರಿಕವು ತೆರವುಗೊಳಿಸಿದೆ. ಮರಿಯುಪೊಲ್ ಬಂದರು ನಗರವನ್ನು ರಕ್ಷಿಸಿಕೊಳ್ಳುವಲ್ಲಿ ಈ ಘಟಕವು ಪ್ರಮುಖ ಪಾತ್ರ ವಹಿಸಿತ್ತು.

ಉಕ್ರೇನ್‌ನ ಅತ್ಯಂತ ಜನಪ್ರಿಯ ಹಾಗೂ ಪರಿಣಾಮಕಾರಿ ಮಿಲಿಟರಿ ಘಟಕಗಳ ಪೈಕಿ ಅಜೊವ್‌ ಬ್ರಿಗೇಡ್‌ ಕೂಡ ಒಂದು. ಆದರೆ, ತೀವ್ರ ಬಲಪಂಥೀಯ ಗುಂಪುಗಳಿಂದ ಹೋರಾಟಗಾರರನ್ನು ಸೇರಿಸಿಕೊಂಡ ಕಾರಣಕ್ಕೆ ಹಾಗೂ ಈ ಘಟಕವು ಅನುಸರಿಸುವ ಕೆಲವು ಯುದ್ಧ ತಂತ್ರಗಳ ಕಾರಣಕ್ಕೆ ಅದರ ಬಗ್ಗೆ ಟೀಕೆಗಳು ಇವೆ. ಈ ಘಟಕವು ತನ್ನ ಶಸ್ತ್ರಾಸ್ತ್ರಗಳನ್ನು ಬಳಸುವುದಕ್ಕೆ ಅಮೆರಿಕವು ನಿಷೇಧ ಹೇರಿತ್ತು.

ಅಮೆರಿಕದ ಕಾನೂನುಗಳ ಪ್ರಕಾರ, ಮಾನವ ಹಕ್ಕುಗಳ ಉಲ್ಲಂಘನೆ ನಡೆಸಿದ ವಿದೇಶಿ ವ್ಯಕ್ತಿಗಳಿಗೆ ಅಥವಾ ಮಿಲಿಟರಿ ಘಟಕಗಳಿಗೆ ಉಪಕರಣಗಳನ್ನು ಪೂರೈಸುವುದರ ಮೇಲೆ, ತರಬೇತಿ ನೀಡುವುದರ ಮೇಲೆ ನಿಷೇಧ ಇದೆ. ಆದರೆ ಈ ಘಟಕವು ಅಂತಹ ಕೃತ್ಯ ನಡೆಸಿದ್ದಕ್ಕೆ ಆಧಾರ ಇಲ್ಲ ಎಂದು ಅಮೆರಿಕ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT