ವಾಷಿಂಗ್ಟನ್: ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿರುವ ಉದ್ಯಮಿ ಇಲಾನ್ ಮಸ್ಕ್ ಅವರ ನಡೆ ಹಾಸ್ಯಾಸ್ಪದವಾಗಿದ್ದು, ಗೊಂದಲವನ್ನುಂಟು ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ಕುರಿತು ನ್ಯೂಜೆರ್ಸಿಯ ಮ್ಯಾರಿಸ್ಟೌನ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಟ್ರಂಪ್, ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದರಿಂದ ಗೊಂದಲ ಹೆಚ್ಚಾಗಿದೆ. ಇದರಿಂದ ಅವರಿಗೆ ಸಂತೋಷವಾಗಿರಬಹುದು, ಆದರೆ ನನಗೆ ಹಾಸ್ಯಾಸ್ಪದ ರೀತಿ ಕಾಣುತ್ತಿದೆ’ ಎಂದಿದ್ದಾರೆ.

ಟ್ರಂಪ್ ಜೊತೆಗಿನ ಭಿನ್ನಾಭಿಪ್ರಾಯದ ಬೆನ್ನಲ್ಲೇ ಭಾನುವಾರ ‘ಅಮೆರಿಕ ಪಾರ್ಟಿ’ ಎಂಬ ಹೆಸರಿನ ಹೊಸ ರಾಜಕೀಯ ಪಕ್ಷ ಘೋಷಿಸಿದ್ದ ಇಲಾನ್ ಮಸ್ಕ್, ಈ ಬಗ್ಗೆ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಮಾಹಿತಿ ನೀಡಿದ್ದರು. ಅಮೆರಿಕದ ಜನರ ಸ್ವಾತಂತ್ರ್ಯವನ್ನು ಹಿಂದಿರುಗಿಸಲು ಪಕ್ಷವನ್ನು ಸ್ಥಾಪಿಸಿರುವುದಾಗಿಯೂ ಹೇಳಿಕೊಂಡಿದ್ದರು.

ತೆರಿಗೆ ಮತ್ತು ವೆಚ್ಚ ಮಸೂದೆ ಸಂಬಂಧಪಟ್ಟಂತೆ ಟ್ರಂಪ್ ಮತ್ತು ಮಸ್ಕ್ ನಡುವೆ ಒಡಕು ಮೂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ವಿರುದ್ಧ ದ್ವೇಷಕಾರುವ ಮೂಲಕ ಬಟಾಬಯಲಾಗಿತ್ತು. ಸ್ವಲ್ಪ ಕಾಲ ತಣ್ಣಾಗಾಗಿದ್ದ ವೈರತ್ವ, ಮಸೂದೆ ಜಾರಿಗೊಳಿಸಲು ಟ್ರಂಪ್ ಆಡಳಿತ ಮುಂದಾಗುತ್ತಿದ್ದಂತೆ ಮತ್ತೆ ಹೆಡೆ ಎತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.