ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ–ಪಾಕ್‌ ನೇರ ಚರ್ಚೆಗೆ ಅಮೆರಿಕ ಬೆಂಬಲ: ಮ್ಯಾಥ್ಯೂ ಮಿಲ್ಲರ್‌

Published 21 ಜೂನ್ 2024, 11:09 IST
Last Updated 21 ಜೂನ್ 2024, 11:09 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಚರ್ಚೆಯನ್ನು ಬೆಂಬಲಿಸುವುದಾಗಿ ಹೇಳಿರುವ ಅಮೆರಿಕ, ಆದರೆ ಮಾತುಕತೆಯ ವೇಗ, ವ್ಯಾಪ್ತಿ ಮತ್ತು ಸ್ವರೂಪವನ್ನು ಈ ಎರಡೂ ದೇಶಗಳು ನಿರ್ಧರಿಸಬೇಕು ಎಂದು ತಿಳಿಸಿದೆ.

‘ಭಾರತ ಮತ್ತು ಪಾಕಿಸ್ತಾನದ ಜತೆಗೆ ಪ್ರಮುಖ ಸಂಬಂಧಗಳ ಮೌಲ್ಯವನ್ನು ಅಮೆರಿಕ ಗೌರವಿಸುತ್ತದೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪರಸ್ಪರ ನೇರ ಚರ್ಚೆಯ ಬಗ್ಗೆ ಈ ಎರಡು ದೇಶಗಳು ನಿರ್ಧಾರ ಕೈಗೊಳ್ಳಬೇಕೇ ಹೊರತು ನಾವಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪ್ರಾದೇಶಿಕ ಭದ್ರತೆಗಿನ ಅಪಾಯಗಳನ್ನು ಎದುರಿಸಲು ಅಮೆರಿಕ ಮತ್ತು ಪಾಕಿಸ್ತಾನ ಪರಸ್ಪರ ಆಸಕ್ತಿಯನ್ನು ಹೊಂದಿವೆ. ಭಯೋತ್ಪಾದನಾ ನಿಗ್ರಹ ಕುರಿತು ಉನ್ನತ ಮಟ್ಟದ ಸಂವಾದದ ಮೂಲಕ ಭದ್ರತೆ ವಿಷಯದಲ್ಲಿ ಪಾಕ್‌ ಜತೆಗೆ ನಾವು ಪಾಲುದಾರರಾಗಿದ್ದೇವೆ. ಭಯೋತ್ಪಾದನಾ ನಿಗ್ರಹ ಸಂವಾದ ಮತ್ತು ಇತರ ದ್ವಿಪಕ್ಷೀಯ ಸಮಾಲೋಚನೆಗಳ ಮೂಲಕ ಪ್ರಾದೇಶಿಕ ಭದ್ರತೆ ಕುರಿತು ವಿವರವಾಗಿ ಚರ್ಚಿಸುವುದನ್ನು ಮುಂದುವರಿಸುತ್ತೇವೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT