ನ್ಯೂಯಾರ್ಕ್: ‘ಅಮೆರಿಕದ ವಸ್ತುಗಳ ಮೇಲೆ ಶೇ 100ರಷ್ಟು ಸುಂಕವನ್ನು ಕೈಬಿಡುವುದಕ್ಕೆ ಭಾರತ ಸಿದ್ಧವಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುನರುಚ್ಚರಿಸಿದ್ದಾರೆ.

‘ಫಾಕ್ಸ್ ನ್ಯೂಸ್’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ. ‘ಭಾರತವು ಅತ್ಯಂತ ಅಧಿಕ ಸುಂಕ ವಿಧಿಸುವ ದೇಶ. ಈ ದೇಶದಲ್ಲಿ ವ್ಯಾಪಾರ ಮಾಡುವುದು ಕಷ್ಟಸಾಧ್ಯ. ಆದರೆ ನಿಮಗೆ ಗೊತ್ತಾ, ಭಾರತವು ನಮ್ಮ ವಸ್ತುಗಳ ಮೇಲೆ ಶೇ 100ರಷ್ಟು ಸುಂಕವನ್ನು ಕೈಬಿಡಲು ಸಿದ್ಧವಿದೆ’ ಎಂದಿದ್ದಾರೆ.

ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಸದ್ಯದಲ್ಲಿಯೇ ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದೆ. ಆದರೆ, ಈ ಕೂಡಲೇ ಒಪ್ಪಂದ ನಡೆಯಬೇಕು ಎಂಬ ಅವಸರದಲ್ಲಿ ನಾನಿಲ್ಲ’ ಎಂದಿದ್ದಾರೆ.

ಅಮೆರಿಕದಲ್ಲಿರುವ ಸಚಿವ ಗೋಯಲ್

ವ್ಯಾಪಾರ ಒಪ್ಪಂದದ ಕುರಿತು ಭಾರತ ಮತ್ತು ಅಮೆರಿಕ ಚರ್ಚೆ ಆರಂಭಿಸಿವೆ. ಈ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಗುರುವಾರವೇ ಮಾಹಿತಿ ನೀಡಿದ್ದಾರೆ. ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ಸದ್ಯ ಅಮೆರಿಕದಲ್ಲಿದ್ದಾರೆ. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹಾವರ್ಡ್ ಲುಟ್ನಿಕ್ ಮತ್ತು ಅಮೆರಿಕ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗೀರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಸುಂಕ ವಿನಾಯಿತಿಗೆ ಮನವಿ: ಯಾವ ವಸ್ತಗಳು ಭಾರತದ ಮನವಿ ಜವಳಿ ಹರಳು ಮತ್ತು ಆಭರಣಗಳು ಚರ್ಮದ ವಸ್ತುಗಳು ಪ್ಲಾಸ್ಟಿಕ್ ರಾಸಾಯನಿಕಗಳು ಸಿದ್ಧ ಉಡುಪು ಏಣ್ಣೆ ಕಾಳುಗಳು ದ್ರಾಕ್ಷಿ ಮತ್ತು ಬಾಳೆಹಣ್ಣುಗಳು ಅಮೆರಿಕದ ಮನವಿ ಕೆಲವು ಕೈಗಾರಿಕಾ ವಸ್ತುಗಳು ಆಟೊಮೊಬೈಲ್ಸ್ (ಪ್ರಮುಖವಾಗಿ ವಿದ್ಯುತ್ ವಾಹನ) ವೈನ್ಸ್ ಪೆಟ್ರೊಲಿಯಂ ಉತ್ಪನ್ನ ಹಾಲು ಆ್ಯಪಲ್ ಮತ್ತು ಕೆಲವು ಡ್ರೈಫ್ರೋಟ್ಸ್

‘ಇಬ್ಬರಿಗೂ ಲಾಭದಾಯಕವಾಗಿರಬೇಕು’

ವ್ಯಾಪಾರ ಒಪ್ಪಂದದ ಚರ್ಚೆಗಳು ಬಹಳ ಸಂಕೀರ್ಣವಾಗಿರುತ್ತವೆ. ಎಲ್ಲ ಆಯಾಮದಿಂದಲೂ ಚರ್ಚೆ ನಡೆಯದ ಹೊರತು ಯಾವುದೂ ನಿರ್ಧರವಾಗುವುದಿಲ್ಲ. ಯಾವುದೇ ವ್ಯಾಪಾರ ಒಪ್ಪಂದವು ಎರಡೂ ದೇಶಗಳಿಗೂ ಲಾಭದಾಯಕವಾಗಿರಬೇಕು. ಇದನ್ನೇ ನಾವು ಬಯಸುತ್ತಿದ್ದೇವೆ.
–ಎಸ್.ಜೈಶಂಕರ್, ವಿದೇಶಾಂಗ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.