ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲದಲ್ಲಿ ಜೈನಧರ್ಮದ ಅಧ್ಯಯನಕ್ಕಾಗಿ ಪೀಠ ಸ್ಥಾಪನೆಯಾಗಿದೆ. ಈ ಉದ್ದೇಶಕ್ಕಾಗಿ ಭಾರತ ಮೂಲದ ಮೂವರು ಅಮೆರಿಕನ್ ದಂಪತಿಗಳು ₹7.3 ಕೋಟಿ (1ಮಿಲಿಯನ್ ಡಾಲರ್) ದೇಣಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಜೈನ ಧರ್ಮದ ಕುರಿತಾದ ಅಧ್ಯಯನಕ್ಕಾಗಿ ಪೀಠ ಸ್ಥಾಪಿಸಿದೆ.

ಪೀಠಕ್ಕೆ ಭಗವಾನ್ ವಿಮಲನಾಥ್ ದತ್ತಿ ಪೀಠ ಎಂದು ಹೆಸರು ಇಡಲಾಗಿದೆ. ಜೈನ ಸಿದ್ಧಾಂತ ಕುರಿತು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸಲು ಹಾಗೂ ಜೈನಧರ್ಮದ ಅಧ್ಯಯನಕ್ಕೆ ಈ ಪೀಠವು ನೆರವಾಗಲಿದೆ.

ಜೈನಧರ್ಮದ ಪರಿಕಲ್ಪನೆಗಳಾದ ಅಹಿಂಸಾ ತತ್ವ, ಅಪರಿಗ್ರಹ, ಅನೇಕಾಂತವಾದ ಕುರಿತು ಅಧ್ಯಯನ ಹಾಗೂ ಆಧುನಿಕ ಸಮಾಜದಲ್ಲಿ ಇವುಗಳ ಅನ್ವಯಿವಿಕೆಯ ಸಾಧ್ಯತೆಗಳಿಗೆ ಪೀಠ ಒತ್ತು ನೀಡಲಿದೆ. ಶಾಂತಿ, ಸಾಮಾಜಿಕ ಸೌಹಾರ್ದ, ಪರಿಸರ ಸುಸ್ಥಿರಾಭಿವೃದ್ಧಿ ಕುರಿತು ಒಲವು ಬೆಳೆಸಿಕೊಳ್ಳಲು, ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಉತ್ತೇಜನ ನೀಡಲಿದೆ.

ವರ್ಧಮಾನ ಚಾರಿಟಬಲ್ ಫೌಂಡೇಶನ್ ಮೂಲಕ ಡಾ.ಮೀರಾ ಮತ್ತು ಡಾ. ಜಸ್ವಂತ್ ಮೋದಿ, ನರೇಂದ್ರ ಮತ್ತು ರೀಟಾ ಪಾರ್ಸನ್ ಫ್ಯಾಮಿಲಿ ಟ್ರಸ್ಟ್ ಮೂಲಕ ಡಾ.ರೀತಾ ಮತ್ತು ಡಾ.ನರೇಂದ್ರ ಪಾರ್ಸನ್, ಶಾ ಫ್ಯಾಮಿಲಿ ಫೌಂಡೇಶನ್ ಮೂಲಕ ರಕ್ಷಾ ಮತ್ತು ಹರ್ಷವರ್ಧನ್ ಶಾ ಅವರು ಪೀಠ ಸ್ಥಾಪನೆಗಾಗಿ ದೇಣಿಗೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.