ನವದೆಹಲಿ: ಭಾರತ ಕೈಗೊಂಡ ಆಪರೇಶನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಉಗ್ರರ ಅಂತ್ಯಕ್ರಿಯೆಯ ಮುಂದಾಳತ್ವ ವಹಿಸಿದ್ದ ವ್ಯಕ್ತಿ ‘ಲಷ್ಕರ್ ಉಗ್ರ ಅಲ್ಲ’ ಎಂದು ಸಮರ್ಥಿಸಿಕೊಂಡಿದ್ದ ಪಾಕಿಸ್ತಾನದ ಸುಳ್ಳು ಈಗ ಬಹಿರಂಗವಾಗಿದೆ. ಜಗತ್ತಿನೆದುರು ‘ಜನಸಾಮಾನ್ಯ’ ಎಂದು ಬಿಂಬಿಸಿದ್ದ ಹಫೀಜ್ ಅಬ್ದುಲ್ ರೌಫ್ ಅಮೆರಿಕದ ವಾಂಟೆಡ್ ಪಟ್ಟಿಯಲ್ಲಿರುವ ಲಷ್ಕರ್ ಉಗ್ರ ಎಂಬುದು ಅಮೆರಿಕದ ಡೇಟಾಬೇಸ್ನಿಂದ ದೃಢಪಟ್ಟಿದೆ.

ರೌಫ್ ಅಮೆರಿಕಕ್ಕೆ ಬೇಕಾಗಿರುವ (ವಾಂಟೆಡ್) ಉಗ್ರರ ಪಟ್ಟಿಯಲ್ಲಿರುವ ಹಫೀಜ್ ಅಬ್ದುಲ್ ರೌಫ್ ಎಂಬ ವ್ಯಕ್ತಿಯ ದತ್ತಾಂಶದೊಂದಿಗೆ ಸರಿಯಾಗಿ ಹೋಲಿಕೆಯಾಗುತ್ತಿದೆ ಎಂದು ಭಾರತದ ಮಾಧ್ಯಮ ಮಾಹಿತಿ ಕೇಂದ್ರ (ಪಿಐಬಿ) ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಅಂತರ್-ಸೇವಾ ಸಾರ್ವಜನಿಕ ಸಂಪರ್ಕಗಳ (ಐಎಸ್ಪಿಆರ್) ಮಹಾನಿರ್ದೇಶಕ ಅಹಮದ್ ಶರೀಫ್ ಚೌಧರಿ ಪತ್ರಿಕಾಗೋಷ್ಠಿ ನಡೆಸಿದ್ದ ವೇಳೆ, ‘ರೌಫ್ ಮೂರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನ ತಂದೆಯಾಗಿದ್ದು, ಸಾಮಾನ್ಯ ವ್ಯಕ್ತಿ. ನೀವು ಅವರ ಕುಟುಂಬದ ಮಾಹಿತಿಯನ್ನು ನೋಡಬಹುದು’ ಎಂದು ಗಣಕೀಕೃತ ಮಾಹಿತಿಯನ್ನು ತೋರಿಸಿದ್ದರು. ಇದರಲ್ಲಿ ರೌಫ್ 1973ರ ಮಾರ್ಚ್ 25ರಂದು ಜನಿಸಿದ್ದು, ಲಾಹೋರ್ ನಿವಾಸಿ ಎಂದು ಹೇಳಿದ್ದರು.

ಆದರೆ ಅಮೆರಿಕದಲ್ಲಿನ ನಿರ್ಬಂಧಿತ ವ್ಯಕ್ತಿಗಳ ಪಟ್ಟಿಯಲ್ಲಿರುವ ಇದೇ ಹೆಸರಿನ ವ್ಯಕ್ತಿಯ ವಿವರಗಳನ್ನು ಹೋಲಿಕೆ ಮಾಡಿದಾಗ ಪಾಕಿಸ್ತಾನವು ನಕಲಿ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಗೊತ್ತಾಗಿದೆ. ಅಮೆರಿಕದ ಬಳಿಯಿರುವ ದತ್ತಾಂಶದ ಪ್ರಕಾರ, ರೌಫ್ ಹಲವು ನಕಲಿ ವಿಳಾಸಗಳನ್ನು ಹೊಂದಿದ್ದಾನೆ. ಇದಲ್ಲದೆ, ಪಾಕಿಸ್ತಾನವೇ ನೀಡಿರುವ ಪಾಸ್ಪೋರ್ಟ್ ವಿವರಗಳೂ ಅಮೆರಿಕದ ಬಳಿ ಇದೆ.

1999 ರಿಂದ ನಿಷೇಧಿತ ಉಗ್ರ ಸಂಘಟನೆ ಲಷ್ಕರ್ ಇ ತೊಯ್ಬಾದ ಸಕ್ರಿಯ ಸದಸ್ಯನಾಗಿರುವ ರೌಫ್, ಜಾಗತಿಕ ಉಗ್ರಗಾಮಿ ಹಫೀಜ್ ಸಯೀದ್ನ ಆಪ್ತ ಸಹಚರ ಎಂದೂ ಹೇಳಲಾಗುತ್ತದೆ.

ಪಾಕಿಸ್ತಾನದ ಪಂಜಾಬ್ ಭಾಗದ ಮುರಿಡ್ಕೆಯಲ್ಲಿರುವ ಎಲ್ಇಟಿ ಕೇಂದ್ರ ಕಚೇರಿಯಲ್ಲಿ ನಡೆದ ಭಯೋತ್ಪಾದಕರ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವವನ್ನು ರೌಫ್ ವಹಿಸಿದ್ದ ಛಾಯಾಚಿತ್ರವನ್ನು ಭಾರತ ಈ ಹಿಂದೆ ಬಿಡುಗಡೆ ಮಾಡಿತ್ತು. ಮೃತರಿಗೆ ನೀಡಲು ತಂದ ಹೂವಿನ ಗುಚ್ಛದೊಂದಿಗೆ ನಿಂತ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸೊಸೆ, ಪಾಕಿಸ್ತಾನಿ ಪಂಜಾಬ್ ಮುಖ್ಯಮಂತ್ರಿ ಮರಿಯಮ್ ನವಾಜ್, ಸಮವಸ್ತ್ರ ಧರಿಸಿದ್ದ ಹಿರಿಯ ಸೇನಾ ಮತ್ತು ಪೊಲೀಸ್ ಅಧಿಕಾರಿಗಳು ಹಾಜರಿದ್ದ ಛಾಯಾಚಿತ್ರವನ್ನು ಭಾರತ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.