ವಾಷಿಂಗ್ಟನ್: ಮುಂಬೈ ದಾಳಿಯ ಆರೋಪಿ ಮತ್ತು ಲಷ್ಕರ್ ಎ–ತಯಬಾದ (ಎಲ್ಇಟಿ) ಆಪರೇಷನ್ ಕಮಾಂಡರ್ ಝಕಿ ಉರ್– ರೆಹಮಾನ್ ಲಖ್ವಿಯ ಬಂಧನವನ್ನು ಅಮೆರಿಕ ಸ್ವಾಗತಿಸಿದೆ. ಭಯೋತ್ಪಾದನೆ ಮತ್ತು ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡದಂತೆ ತಡೆಯುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಅಮೆರಿಕ ಹೇಳಿದೆ.

ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಆರೋಪದಡಿ ಲಖ್ವಿಯನ್ನುಶನಿವಾರ ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.

ಮುಂಬೈ ದಾಳಿಯ ಪ್ರಮುಖ ಆರೋಪಿ, ನಿಷೇಧಿತ ಉಗ್ರ ಲಖ್ವಿ, 2015ರಿಂದ ಜಾಮೀನು ಪಡೆದು ಹೊರಗಿದ್ದ. ಆತನನ್ನು ಪಂಜಾಬ್ನ ಭಯೋತ್ಪಾದನಾ ನಿಗ್ರಹ ಇಲಾಖೆಯು (ಸಿಟಿಡಿ) ಶನಿವಾರ ಬಂಧಿಸಿದೆ.

‘ಉಗ್ರ ನಾಯಕ ಝಕಿ ಉರ್– ರೆಹಮಾನ್ ಲಖ್ವಿಯ ಬಂಧನವನ್ನು ಅಮೆರಿಕ ಸ್ವಾಗತಿಸಿದೆ. ಭಯೋತ್ಪಾದನೆ ಮತ್ತು ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡದಂತೆ ತಡೆಯಲು ಈ ಕ್ರಮ ಅಗತ್ಯವಾಗಿತ್ತು’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯ ಏಷ್ಯಾ ಬ್ಯೂರೊ ಟ್ವೀಟ್ ಮಾಡಿದೆ.

‘ಲಖ್ವಿ ವಿರುದ್ಧದ ಕಾನೂನು ಕ್ರಮ ಮತ್ತು ಶಿಕ್ಷೆಗಳ ಮೇಲೆ ನಾವು ನಿಗಾ ವಹಿಸುತ್ತೇವೆ. ಮುಂಬೈ ದಾಳಿಗಾಗಿ ಆತನಿಗೆ ಶಿಕ್ಷೆಯಾಗಬೇಕು’ ಎಂದು ಬ್ಯುರೊ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.