ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಥಿಯೋಪಿಯ ದೇಶಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಪ್ರಧಾನಿ ಅಬಿಯ್ ಅಹ್ಮದ್ ಅಲಿ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ವಂದೇ ಮಾತರಂ ಗೀತೆಯನ್ನು ಪ್ರಸ್ತುತ ಪಡಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿತ್ತು.

ಈ ಔತಣಕೂಟದಲ್ಲಿ ಮೂವರು ಗಾಯಕರು ವಂದೇ ಮಾತರಂ ಗೀತೆ ಗಾಯನ ಪ್ರಸ್ತುತಪಡಿಸಿದರು. ಗಾಯಕರ ತಂಡ ವಂದೇ ಮಾತರಂ ಗೀತೆ ಹಾಡುತ್ತಿದ್ದಂತೆ ಪ್ರಧಾನಿ ಮೋದಿ ಕೈ ಎತ್ತಿ ಚಪ್ಪಾಳೆ ತಟ್ಟಿದ್ದರು. ತಕ್ಷಣ ಅಲ್ಲಿದ್ದ ಇತರರೂ ಚಪ್ಪಾಳೆ ತಟ್ಟಿದ್ದಾರೆ.
.ಭಾರತ– ಇಥಿಯೋಪಿಯಾ: ಮೂರು ಒಪ್ಪಂದಗಳಿಗೆ ಸಹಿ.ಭಾರತದ ಪ್ರಧಾನಿಗೆ ಇಥಿಯೋಪಿಯಾ ಪ್ರಶಸ್ತಿ: ಮೋದಿಗಿದು 28ನೇ ಅಂತರರಾಷ್ಟ್ರೀಯ ಗೌರವ .
ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಬಾರೀ ಸದ್ದು ಮಾಡಿತ್ತು. ಇದರ ಬಗ್ಗೆ ಇಥಿಯೋಪಿಯಾದ ಮಾಧ್ಯಮಗಳು ಕೂಡ ವರದಿ ಮಾಡಿದ್ದವು.

ಇಥಿಯೋಪಿಯದಲ್ಲಿ ಈಗಲೂ ತಮ್ಮ ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿ ಅಲ್ಲಿನ ಜನರು ಹಳೇ ಮಾದರಿಯ ಸಂಗೀತ ವಾದ್ಯಗಳನ್ನು ಬಳಕ್ಕೆ ಮಾಡುವುದು ವಾಡಿಕೆ. ಅವರಿಗೆ ಅಧುನಿಕ ಸಾಧನಗಳು ಗೊತ್ತಿಲ್ಲ ಅಂದೇನಿಲ್ಲ, ಆದರೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿ ನಮ್ಮ ಪೂರ್ವಜರು ನೀಡಿರುವ ಸಂಗೀತ ಸಾಧನಗಳನ್ನು ಬಳಕೆ ಮಾಡುತ್ತೇವೆ ಎಂದು ಅಲ್ಲಿನ ಸರ್ಕಾರಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ’ದಿ ರಿಪೋರ್ಟರ್‘ ಎಂಬ ಪತ್ರಿಕೆ ವರದಿ ಮಾಡಿದೆ.

ಇಲ್ಲಿನ ಸಂಸ್ಕೃತಿ ಮತ್ತು ಸಂಗೀತ ತುಂಬಾ ವೈವಿದ್ಯಮಯವಾಗಿದೆ. ದೇಶದ ಪ್ರತಿಯೊಂದು ಸಮುದಾಯ ಮತ್ತು ಬುಡಕಟ್ಟುಗಳು ತಮ್ಮದೇ ಆದ ವಿಶೇಷತೆ ಹೊಂದಿವೆ. ಅವರ ಜನಪದ ಕಲೆ, ಸಂಗೀತ, ಹಾಡು, ಸಂಸ್ಕೃತಿ ಸೇರಿ ಎಲ್ಲವೂ ವೈವಿದ್ಯಮಯವಾಗಿದೆ.

ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸುವಾಗ ಅಧುನಿಕ ವಾದ್ಯಗಳ ಜೊತೆಗೆ ಪಾರಂಪರಿಕ ಸಾಧನಗಳನ್ನು ಬಳಕೆ ಮಾಡಿದ್ದು ವಿಶೇಷವಾಗಿತ್ತು. ಮೊದಲ ಸಾಲಿನಲ್ಲಿ ಕುಳಿತ ಸಂಗೀತಗಾರರು ಪಾಶ್ಚತ್ಯ ವಾದ್ಯಗಳನ್ನು ನುಡಿಸಿದರೆ, ಎರಡನೇ ಸಾಲಿನಲ್ಲಿ ಕುಳಿತವರು ಪಾರಂಪರಿಕ ವಾದ್ಯಗಳ ಮೂಲಕ ಸಂಗೀತವನ್ನು ಪ್ರಸ್ತುತಪಡಿಸಿದರು.

ಕಾರ್ಡೋಫೋನ್ಗಳು (ವೀಣೆ, ಗೀಟಾರ್ ಮಾದರಿಯ ತಂತಿ ವಾದ್ಯಗಳು), ವಾಶಿಂಟ್ (ಪ್ರಾಣಿಗಳ ಕೊಂಬಿನಿಂದ ಮಾಡಿದ ಕೊಳಲಿನ ಮಾದರಿಯ ವಾದನ), ಕಚೆಲ್, ಟೂಮ್ (ಬಿದಿರಿನಿಂದ ಮಾಡಿರುವ ಕೊಳಲಿನ ವಾದನ) ಕೆಬೆರೊ, ಅಟಾಮೊ, ಬೀಟಾ (ಚರ್ಮದಿಂದ ಮಾಡಿದ ಸಣ್ಣ ತಮಟೆ, ಕೈಯಿಂದ ಬಾರಿಸುವ ಡ್ರಮ್)ಗಳು ಸೇರಿ ಬೆಗೆನಾ ಮತ್ತು ಟಾಮ್-ಟಾಮ್ ಬಳಕೆ ಮಾಡಲಾಗಿತ್ತು. ಇವು ನಮ್ಮ ಸಂಸ್ಕೃತಿಯ ಬಿಂಬವಾಗಿದ್ದವು ಎಂದು ಅಧಿಕಾರಿ ಹೇಳಿದ್ದರು.

ಇಥಿಯೋಪಿಯ ದೇಶ ಉತ್ತರ ಆಫ್ರಿಕಾ ಖಂಡದಲ್ಲಿದೆ. ಉತ್ತರಕ್ಕೆ ಎರಿಟ್ರಿಯಾ, ದಕ್ಷಿಣಕ್ಕೆ ಕೀನ್ಯಾ, ಪೂರ್ವಕ್ಕೆ ಸೊಮಾಲಿಯ ಹಾಗೂ ಪಶ್ಚಿಮದಲ್ಲಿ ಸುಡಾನ್ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಇಲ್ಲಿನ ಭೂಭಾಗ ಕಡಿದಾದ ಶಿಖರಗಳು ಮತ್ತು ಫಲವತ್ತಾದ ಪ್ರಸ್ಥ ಭೂಮಿಯನ್ನು ಹೊಂದಿದೆ.

ಆದಾಗ್ಯೂ ದೇಶವು ಬಡತನದ ನಡುವೆಯೂ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಹಲವಾರು ತಲೆಮಾರುಗಳಿಂದ ಉಳಿಸಿಕೊಂಡು ಬಂದಿದೆ. ಇಲ್ಲಿ ಶೇ 63 ರಷ್ಟು ಜನರ ಕ್ರೈಸ್ತ ಧರ್ಮ, ಶೇ 37ರಷ್ಟು ಜನರು ಇಸ್ಲಾಂ ಧರ್ಮಕ್ಕೆ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.