ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಅಮೆರಿಕ ‘ಸೆರೆ’ಯಲ್ಲಿ ವೆನೆಜುವೆಲಾ ಅಧ್ಯಕ್ಷ: ಅಂತರರಾಷ್ಟ್ರೀಯ ಸಮುದಾಯ ಖಂಡನೆ

Published : 3 ಜನವರಿ 2026, 16:30 IST
Last Updated : 3 ಜನವರಿ 2026, 16:30 IST
ಫಾಲೋ ಮಾಡಿ
Comments
ಅಮೆರಿಕ ಸೇನೆಯ ವಿಶೇಷ ಪಡೆ ವೆನೆಜುವೆಲಾ ಅಧ್ಯಕ್ಷ ನಿಕೊಲಸ್‌ ಮಡೂರೊ ಅವರನ್ನು ವಶಕ್ಕೆ ಪಡೆಯುವುದನ್ನು ನೇರವಾಗಿ ವೀಕ್ಷಿಸಿದೆ. ಇದು ಅದ್ಭುತವಾಗಿತ್ತು. ಅಕ್ಷರಶಃ ಟಿವಿ ಶೋ ರೀತಿ ಇತ್ತು
– ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷ
ಅಮೆರಿಕದ ಮಿಲಿಟರಿ ದಬ್ಬಾಳಿಕೆ ಮತ್ತು ಸರ್ವಾಧಿಕಾರ ಕೊನೆಗೊಳಿಸಲು ವೆನೆಜುವೆಲಾದ ಎಲ್ಲ ಸಾಮಾಜಿಕ ಮತ್ತು ರಾಜಕೀಯ ಶಕ್ತಿಗಳು ಒಂದಾಗಬೇಕು.
ಡಿಯೊಸ್‌ ಡಾಡೊ ಕಬೆಲ್ಲೊ, ವೆನೆಜುವೆಲಾದ ಗೃಹ ಸಚಿವ
ವೆನೆಜುವೆಲಾದ ಜನರ ಮೇಲೆ ಅಮೆರಿಕ ನಡೆಸಿರುವ ದಾಳಿ ಕ್ರಿಮಿನಲ್‌ ಅಪರಾಧ. ಅಂತರರಾಷ್ಟ್ರೀಯ ಸಮುದಾಯ ಇದರ ವಿರುದ್ಧ ತುರ್ತಾಗಿ ಸ್ಪಂದಿಸಬೇಕು.
– ಕ್ಯೂಬಾ
ವೆನೆಜುವೆಲಾದಲ್ಲಿ ಸಂಯಮ ಪಾಲಿಸಬೇಕು. ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಅಮೆರಿಕ ಗೌರವ ಕೊಡಬೇಕು.
– ಐರೋಪ್ಯ ಒಕ್ಕೂಟ
ನಾವು ಶತ್ರುಗಳಿಗೆ ಮಣಿಯುವುದಿಲ್ಲ. ದೇವರು ಬಯಸಿದರೆ ದೇವರ ಅನುಗ್ರಹವಿದ್ದರೆ ನಾವು ಶತ್ರುವನ್ನು ನಮ್ಮ ಮುಂದೆ ಮಂಡಿಯೂರುವಂತೆ ಮಾಡುತ್ತೇವೆ
– ಆಯತೊಲ್ಲಾ ಅಲಿ ಖಮೇನಿ, ಇರಾನ್‌ನ ಪರಮೋಚ್ಚ ನಾಯಕ 
ವೆನೆಜುವೆಲಾದ ಅಧ್ಯಕ್ಷ ಮತ್ತು ಪತ್ನಿಯನ್ನು ಸೆರೆಹಿಡಿದು ಬಲವಂತಾಗಿ ದೇಶದಿಂದ ಹೊರಗೆ ಹಾಕಿರುವುದು ರಾಷ್ಟ್ರದ ಸಾರ್ವಭೌಮತ್ವಕ್ಕೆ ವಿರುದ್ಧವಾದದ್ದು. ಅಮೆರಿಕ ತುರ್ತಾಗಿ ಸ್ಪಷ್ಟನೆ ನೀಡಬೇಕು
– ರಷ್ಯಾದ ವಿದೇಶಾಂಗ ಸಚಿವಾಲಯ
ವೆನೆಜುವೆಲಾದಲ್ಲಿ ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸುತ್ತೇವೆ ಮತ್ತು ಕಳವಳ ವ್ಯಕ್ತಪಡಿಸುತ್ತೇವೆ. ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು.
– ಗೇಬ್ರಿಯೆಲ್ ಬೊರಿಕ್‌ ಚಿಲಿ ಅಧ್ಯಕ್ಷ 
ವೆನೆಜುವೆಲಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು. ಅಮೆರಿಕ ನಡೆಸಿರುವ ಏಕಪಕ್ಷೀಯ ಮಿಲಿಟರಿ ಕ್ರಮವನ್ನು ವಿಶ್ವಸಂಸ್ಥೆ ಗಮನಿಸಬೇಕು
– ಗುಸ್ತಾವೊ ಪೆಟ್ರೊ, ಕೊಲಂಬಿಯಾ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT