ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ ಅಧ್ಯಕ್ಷ ರೈಸಿ ನಿಧನ: ಅಂತಿಮ ನಮನ ಸಲ್ಲಿಸಿದ ಉಪರಾಷ್ಟ್ರಪತಿ ಧನ್‌ಕರ್

Published 22 ಮೇ 2024, 14:37 IST
Last Updated 22 ಮೇ 2024, 14:37 IST
ಅಕ್ಷರ ಗಾತ್ರ

ತೆಹ್ರಾನ್‌: ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿಗೆ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಬುಧವಾರ ಅಂತಿಮ ನಮನ ಸಲ್ಲಿಸಿದರು.

ಇರಾನ್‌ಗೆ ತೆರಳಿದ ಅವರು, ರೈಸಿ ಜತೆಗೆ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ವಿದೇಶಾಂಗ ಸಚಿವ ಹುಸೇನ್ ಅಮಿರ್ ಅಬ್ದುಲ್ಲಾಹಿಯಾನ್ ಹಾಗೂ ಕೆಲವು ಅಧಿಕಾರಿಗಳಿಗೆ ಅಂತಿಮ ನಮನ ಸಲ್ಲಿಸಿದರು.

ಇದೇ ವೇಳೆ ಇರಾನ್‌ನ ಹಂಗಾಮಿ ಅಧ್ಯಕ್ಷ ಡಾ. ಮೊಹಮ್ಮದ್ ಮೊಖ್ಬರ್ ಅವರನ್ನು ಭೇಟಿಯಾಗಿ ಸಂತಾಪ ಸೂಚಿಸಿದರು.

ಭಾನುವಾರ (ಮೇ 19) ಪೂರ್ವ ಅಜರ್‌ಬೈಜಾನ್‌ ಪ್ರಾಂತ್ಯದಲ್ಲಿ ಅಣೆಕಟ್ಟು ಯೋಜನೆಯೊಂದನ್ನು ಉದ್ಘಾಟಿಸಿ ಮರಳುತ್ತಿದ್ದಾಗ ಇರಾನ್–ಅಜರ್‌ಬೈಜಾನ್ ಗಡಿ ಸನಿಹದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT