ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ– ರಷ್ಯಾ ನಡುವೆ ವೀಸಾ ಮುಕ್ತ ಗುಂಪು ಪ್ರವಾಸ  

ಪ್ರಯಾಣ ಸರಾಗಗೊಳಿಸುವ ಒಪ್ಪಂದಕ್ಕೆ ಈ ವರ್ಷಾಂತ್ಯದೊಳಗೆ ಸಹಿ: ರಷ್ಯಾ ಸಚಿವರ ಹೇಳಿಕೆ
Published 17 ಮೇ 2024, 18:41 IST
Last Updated 17 ಮೇ 2024, 18:41 IST
ಅಕ್ಷರ ಗಾತ್ರ

ಮಾಸ್ಕೊ (ಪಿಟಿಐ): ‘ರಷ್ಯಾ ಮತ್ತು ಭಾರತ ನಡುವೆ ಸರಾಗ ಪ್ರಯಾಣದ ದ್ವಿಪಕ್ಷೀಯ ಒಪ್ಪಂದಕ್ಕಾಗಿ ಜೂನ್‌ನಲ್ಲಿ ಮಾತುಕತೆ ಪ್ರಾರಂಭ
ವಾಗಲಿದೆ. ಉಭಯ ರಾಷ್ಟ್ರಗಳು ವೀಸಾ ಮುಕ್ತ ಗುಂಪು ಪ್ರವಾಸ ವಿನಿಮಯ ಪ್ರಾರಂಭಿಸುವ ಮೂಲಕ ತಮ್ಮ ಪ್ರವಾಸೋದ್ಯಮ ಸಂಬಂಧವನ್ನೂ ಬಲಪಡಿಸಲು ಸಜ್ಜಾಗಿವೆ’ ಎಂದು ರಷ್ಯಾದ ಸಚಿವರೊಬ್ಬರು ತಿಳಿಸಿದರು.

‘ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಆಂತರಿಕ ಸಮನ್ವಯತೆ ಅಂತಿಮ ಹಂತದಲ್ಲಿದೆ’ ಎಂದು ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ಬಹುಪಕ್ಷೀಯ ಆರ್ಥಿಕ ಸಹಕಾರ ಮತ್ತು ವಿಶೇಷ ಯೋಜನೆಗಳ ವಿಭಾಗದ ನಿರ್ದೇಶಕರೂ ಆದ ನಿಕಿಟ ಕೊಂಡ್ರಾಟ್ಯೆವ್ ಬುಧವಾರ ಹೇಳಿರುವುದಾಗಿ ‘ಆರ್‌ಟಿ ನ್ಯೂಸ್’ ವರದಿ ಮಾಡಿದೆ. 

ಕಜಾನ್‌ನಲ್ಲಿ ನಡೆದ ‘ರಷ್ಯಾ - ಇಸ್ಲಾಮಿಕ್ ವರ್ಲ್ಡ್: ಕಜನ್‌ಫೋರಮ್ 2024’ ಸಮಾವೇಶದ ವೇಳೆ ಮಾತನಾಡಿದ ಸಚಿವರು, ಉಭಯ ರಾಷ್ಟ್ರಗಳು ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯ ಕೇಂದ್ರಗಳನ್ನು ಪ್ರಾರಂಭಿಸಲು ಸಜ್ಜಾಗುತ್ತಿವೆ. ಕರಡು ಒಪ್ಪಂದದ ಕುರಿತು ಮೊದಲ ಚರ್ಚೆಯನ್ನು ಜೂನ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ವರ್ಷಾಂತ್ಯದ ವೇಳೆಗೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಹೇಳಿದರು.

ಚೀನಾ ಮತ್ತು ಇರಾನ್‌ನೊಂದಿಗೆ ಆರಂಭಿಸಿರುವ ವೀಸಾ-ಮುಕ್ತ ಪ್ರವಾಸಿ ವಿನಿಮಯ ಯಶಸ್ಸು ಕಂಡಿದ್ದು ಭಾರತದ ಜತೆಗೂ ಆರಂಭಿಸಲು ರಷ್ಯಾ ಯೋಜಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT