ನವದೆಹಲಿ: ವಿಶ್ವಸಂಸ್ಥೆಯ ಮೂಲಕ ಭಾರತ್ ಬಯೋಟೆಕ್‌ನ ಕೋವಿಡ್–19 ಲಸಿಕೆ 'ಕೋವ್ಯಾಕ್ಸಿನ್' ಪೂರೈಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ಥಗಿತಗೊಳಿಸಿದೆ. ಲಸಿಕೆ ಪರಿಶೀಲನೆಯಲ್ಲಿ ಪತ್ತೆಯಾಗಿರುವ ಕೊರತೆಗಳನ್ನು ಸರಿಪಡಿಸಿಕೊಳ್ಳಲು ಹಾಗೂ ತಯಾರಿಕಾ ಘಟಕಗಳನ್ನು ಉನ್ನತೀಕರಿಸಿಕೊಳ್ಳಲು ಅವಕಾಶ ನೀಡಿರುವುದಾಗಿ ತಿಳಿಸಿದೆ.

ಕೋವ್ಯಾಕ್ಸಿನ್ ಲಸಿಕೆ ಪಡೆದಿರುವ ರಾಷ್ಟ್ರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವಿವರಿಸಿಲ್ಲ.

'ಕೋವ್ಯಾಕ್ಸಿನ್ ಲಸಿಕೆಯು ಕೋವಿಡ್–19 ವಿರುದ್ಧ ಪರಿಣಾಮಕಾರಿಯಾಗಿದೆ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಕಳವಳ ಇಲ್ಲ. ಆದರೆ, ರಫ್ತು ಮಾಡುವ ಉದ್ದೇಶದಿಂದ ನಡೆಸಲಾಗುತ್ತಿದ್ದ ಲಸಿಕೆ ತಯಾರಿಯನ್ನು ಕಂಪನಿಯು ಸ್ಥಗಿತಗೊಳಿಸಿರುವುದರಿಂದ, ಕೋವ್ಯಾಕ್ಸಿನ್ ಬಳಸಿರುವ ರಾಷ್ಟ್ರಗಳಲ್ಲಿ ಲಸಿಕೆಯ ಪೂರೈಕೆಗೆ ತೊಡಕುಂಟಾಗಲಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಸ್ತಾಪಿಸಿದೆ.

ಮಾರ್ಚ್ 14ರಿಂದ 22ರ ವರೆಗೂ ನಡೆಸಿರುವ ಪರಿಶೀಲನೆಯಲ್ಲಿ ಈ ವಿಚಾರ ತಿಳಿದು ಬಂದಿರುವುದಾಗಿ ಹೇಳಿದೆ.

ಇದನ್ನೂ ಓದಿ–ಶಾಂಘೈನಲ್ಲಿ 2ನೇ ಹಂತದ ಲಾಕ್ಡೌನ್: ಕೋವಿಡ್ ಪರೀಕ್ಷೆಗೆ ಮಾತ್ರ ಹೊರಬರಲು ಅವಕಾಶ

ಈ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್, 'ಕೋವಿಡ್–19 ಲಸಿಕೆ ಕೋವ್ಯಾಕ್ಸಿನ್‌ನ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮೇಲೆ ಯಾವುದೇ ವ್ಯತ್ಯಾಸವಾಗದು. ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿರುವ ಲಕ್ಷಾಂತರ ಜನರಿಗೆ ವಿತರಣೆಯಾಗಿರುವ ಲಸಿಕೆ ಪ್ರಮಾಣಪತ್ರವು ಈಗಲೂ ಮಾನ್ಯತೆ ಹೊಂದಿದೆ' ಎಂದು ತಿಳಿಸಿದೆ.

ಬೇಡಿಕೆ ಕಡಿಮೆಯಾಗಿರುವುದರಿಂದ ಲಸಿಕೆ ತಯಾರಿಕೆಯ ವೇಗವನ್ನು ಕಡಿತಗೊಳಿಸಿರುವುದಾಗಿ ಶುಕ್ರವಾರ ಭಾರತ್ ಬಯೋಟೆಕ್ ಹೇಳಿತ್ತು.

ಇದನ್ನೂ ಓದಿ–India Covid-19 Updates: ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ, ಸಾವಿನ ಸಂಖ್ಯೆ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.