ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ಹೆಚ್ಚು ಅಪಾಯ ಉಂಟು ಮಾಡಬಹುದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Last Updated 29 ನವೆಂಬರ್ 2021, 11:35 IST
ಅಕ್ಷರ ಗಾತ್ರ

ಜಿನಿವಾ: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ನ ಸಾಂಕ್ರಾಮಿಕಗೊಳ್ಳುವಿಕೆಯ ಸಾಮರ್ಥ್ಯದ ಬಗ್ಗೆ ನಿಖರತೆ ಇಲ್ಲವಾದರೂ, ಅದು ಅತ್ಯಂತ ಹೆಚ್ಚು ಅಪಾಯವನ್ನುಂಟುಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಎಚ್ಚರಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ತಳಿಯು ‘ಹೆಚ್ಚಿನ ರೂಪಾಂತರಗಳೊಂದಿಗೆ ಅತ್ಯಂತ ವಿಭಿನ್ನವಾಗಿ ರೂಪುಗೊಂಡಿದೆ. ಹೀಗಾಗಿ ಈ ವೈರಸ್‌ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಮತ್ತು ದೊಡ್ಡ ಮಟ್ಟದಲ್ಲಿ ಪ್ರಸರಣ ಹೊಂದುವ ಸಾಧ್ಯತೆಗಳಿವೆ. ಜಾಗತಿಕ ಮಟ್ಟದಲ್ಲಿ ಓಮೈಕ್ರಾನ್ ಮತ್ತಷ್ಟು ಹರಡುವ ಸಾಧ್ಯತೆ ಹೆಚ್ಚು. ಓಮೈಕ್ರಾನ್‌ ತಳಿಯಿಂದ ಸೋಂಕಿಂಗೆ ಒಳಗಾದರು ಮೃತಪಟ್ಟ ಪ್ರಕರಣಗಳು ಈ ವರೆಗೆ ಒಂದೂ ಪತ್ತೆಯಾಗಿಲ್ಲ,’ ಎಂದು ಆರೋಗ್ಯ ಸಂಸ್ಥೆಯು ತನ್ನ ತಾಂತ್ರಿಕ ಟಿಪ್ಪಣಿಯಲ್ಲಿ ಹೇಳಿದೆ.

‘ಹೊಸ ರೂಪಾಂತರವು ಹಿಂದಿನದಕ್ಕಿಂತಲೂ ಹೆಚ್ಚು ಅಪಾಯಕಾರಿ, ಮಾರಣಾಂತಿಕವೆಂದು ಸಾಬೀತಾಗದೇ ಇರಬಹುದು. ಆದರೆ, ಅದು ಹೆಚ್ಚು ಸುಲಭವಾಗಿ ಹರಡಿದರೆ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತವೆ. ಆರೋಗ್ಯ ವ್ಯವಸ್ಥೆಗಳ ಮೇಲೆ ವಿಪರೀತ ಒತ್ತಡ ಸೃಷ್ಟಿಯಾಗುತ್ತದೆ. ಇದರಿಂದಾಗಿ ಹೆಚ್ಚಿನ ಸಾವುಗಳು ಸಂಭವಿಸುತ್ತವೆ,‘ ಎಂದು ಸಂಸ್ಥೆ ಹೇಳಿದೆ.

‘ಓಮೈಕ್ರಾನ್‌ನಿಂದ ಮತ್ತೊಂದು ಪ್ರಮುಖ ಅಲೆ ಏನಾದರೂ ಎದ್ದರೆ, ಪರಿಣಾಮಗಳು ಕೆಟ್ಟದಾಗಿರುತ್ತದೆ ಮತ್ತು ಹೆಚ್ಚಿರುತ್ತದೆ,’ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ

‘ಕೊರೊನಾ ವೈರಸ್‌ ಎಲ್ಲಿ ಮತ್ತು ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದರ ಸ್ಪಷ್ಟ ಚಿತ್ರಣ ಪಡೆಯಲು ದೇಶಗಳು ತಮ್ಮ ತಪಾಸಣಾ ವ್ಯವಸ್ಥೆಯನ್ನು ಬಲಪಡಿಸಬೇಕು. ಜತೆಗೆ, ಕೋವಿಡ್‌ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಬೇಕು. ಆದರೆ, ಹೊಸ ಮಾದರಿ ಪತ್ತೆಯಾದ ರಾಷ್ಟ್ರಗಳಿಗೆ ವಿಮಾನಯಾನ ರದ್ದು ಮಾಡುವುದು ಸರಿಯಲ್ಲ’ ಎಂದು ಡಬ್ಲ್ಯುಎಚ್‌ಒ ಹೇಳಿದೆ.

‘ಓಮೈಕ್ರಾನ್‌ ರೂಪಾಂತರವು ಈಗ ವಿಶ್ವದ ಹಲವಾರು ಪ್ರದೇಶಗಳಲ್ಲಿ ಪತ್ತೆಯಾಗಿದೆ. ಆದರೆ, ಆಫ್ರಿಕಾವನ್ನು ಗುರಿಯಾಗಿಟ್ಟುಕೊಂಡು ಪ್ರಯಾಣ ನಿಷೇಧ ಮಾಡುವುದು ಜಾಗತಿಕ ಒಗ್ಗಟ್ಟಿನ ಮೇಲೆ ನಡೆಸುವ ದಾಳಿಯಾಗಲಿದೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಮಾಟ್ಶಿಡಿಸೊ ಮೊಯೆಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT