ನ್ಯೂಯಾರ್ಕ್/ಬೀಜಿಂಗ್: ಅಮೆರಿಕ, ಬ್ರಿಟನ್, ಚೀನಾ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಹಾಗೂ ವಿಶ್ವಸಂಸ್ಥೆಯಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ ಯಶಸ್ವಿಯಾಗಿ ನಡೆದಿದೆ. ವಿವಿಧ ರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಮುಂದಾಳತ್ವದಲ್ಲಿ ಯೋಗದಿನದ ಕಾರ್ಯಕ್ರಮಗಳು ನಡೆದಿದ್ದು, ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಆಗಿರುವ ಪಿ.ಹರೀಶ್ ಅವರ ಉಪಸ್ಥಿತಿಯಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಯೋಗ ದಿನಾಚರಣೆ ನಡೆದಿದೆ. ರಾಯಭಾರಿಗಳು, ವಿಶ್ವಸಂಸ್ಥೆ ಅಧಿಕಾರಿಗಳು, ಸದಸ್ಯರು ಸೇರಿ 1,200 ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ನಲ್ಲಿ ರಾಯಭಾರ ಕಚೇರಿಯಿಂದ 7 ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ 10 ಸಾವಿರ ಮಂದಿ ಭಾಗಿಯಾಗಿದ್ದರು. ಭಾರತದ ಖ್ಯಾತ ನಟ ಅನುಪಮ ಖೇರ್ ಕೂಡ ಪಾಲ್ಗೊಂಡಿದ್ದರು.

ಲಂಡನ್ನಲ್ಲೂ ಹೈಕಮಿಷನ್ ಸಹಯೋಗದಲ್ಲಿ ಯೋಗದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಚೀನಾ ರಾಜಧಾನಿ ಬೀಜಿಂಗ್ನಲ್ಲಿರುವ ರಾಯಭಾರ ಕಚೇರಿ ಸಂಕೀರ್ಣ, ಶಾಂಘೈ, ಪರ್ಲ್ ನದಿ ಸಮೀಪದಲ್ಲೂ ಯೋಗ ದಿನದ ಕಾರ್ಯಕ್ರಮಗಳು ನಡೆದಿವೆ. ಉಳಿದಂತೆ ಸಿಂಗಪುರ, ಜಪಾನ್, ಆಸ್ಟ್ರೇಲಿಯಾ, ನೇಪಾಳ, ಥಾಯ್ಲೆಂಡ್, ಶ್ರೀಲಂಕಾ, ಮಲೇಷ್ಯಾದಲ್ಲೂ ಯೋಗ ದಿನಾಚರಣೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.