ವಾಷಿಂಗ್ಟನ್: ಅಧ್ಯಕ್ಷರಾಗಿ ಜೋ ಬೈಡನ್ ಅವರನ್ನು ಆಯ್ಕೆ ಮಾಡುವ ಮೂಲಕ ಅಮೆರಿಕನ್ನರು ಈ ರಾಷ್ಟ್ರಕ್ಕೆ ಹೊಸ ಕನಸಿನ, ಹೊಸ ದಿನದ ಭರವಸೆ ಮೂಡಿಸಿದ್ದಾರೆ ಎಂದು ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಶನಿವಾರ ರಾತ್ರಿ ಬಣ್ಣಿಸಿದ್ದಾರೆ.

ಚುನಾವಣೆಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ತಮ್ಮ ಆಯ್ಕೆ ಬಳಿಕ ಮಾತನಾಡಿದ ಅವರು, ಮುಂದಿನ ನಾಲ್ಕು ವರ್ಷಗಳಿಗೆ ಮತದಾರರು ತಮ್ಮ ನಿರ್ಣಯ ನೀಡಿದ್ದಾರೆ. ಈಗ ನಿಜವಾಗಿ ಅಭಿವೃದ್ಧಿಯ ಕೆಲಸಗಳು ಶುರುವಾಗಲಿವೆ ಎಂದು ಹೇಳಿದ್ದಾರೆ.

ಗೆಲುವಿನ ಸಂದರ್ಭದಲ್ಲಿ ಅವರು ತಮ್ಮ ತಾಯಿ ಶ್ಯಾಮಲಾ ಗೋಪಾಲನ್ ಅವರನ್ನೂ ನೆನೆಪಿಸಿಕೊಂಡಿದ್ದಾರೆ.

‘ಪ್ರತಿ ದಿನವೂ ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಆಲೋಚನೆಯಲ್ಲಿ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತೇವೆ‘ ಎಂದು ಅವರು ಜನರನ್ನುದ್ದೇಶಿಸಿ ಭಾವುಕರಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.