ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌: ಝಪೋರಿಝಿಯಾ ಅಣುಶಕ್ತಿಸ್ಥಾವರ ಪರಿಶೀಲನೆ ಶೀಘ್ರ

Last Updated 29 ಆಗಸ್ಟ್ 2022, 11:17 IST
ಅಕ್ಷರ ಗಾತ್ರ

ಬರ್ಲಿನ್‌: ಉಕ್ರೇನ್‌ನ ಝಪೋರಿಝಿಯಾದಲ್ಲಿ ಇರುವ ಯುರೋಪ್‌ನ ಅತಿದೊಡ್ಡದು ಎನ್ನಲಾದ ಅಣುಶಕ್ತಿ ಸ್ಥಾವರದ ವಸ್ಥುಸ್ಥಿತಿ ಪರಿಶೀಲನೆ ಕಾರ್ಯವು ಶೀಘ್ರವೇ ನಡೆಯಲಿದೆ.

ಈ ಸಂಬಂಧ ವಿಶ್ವಸಂಸ್ಥೆಯ ಕಣ್ಗಾವಲು ಸಂಸ್ಥೆ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (ಐಎಇಎ) ಕಾರ್ಯಾಚರಣೆ ಪ್ರತಿಕ್ರಿಯೆಯು ಪ್ರಗತಿಯಲ್ಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಸ್ಥಾವರ ಪರಿಶೀಲನೆಗೆ ಹಲವು ತಿಂಗಳ ಹಿಂದೆ ಐಎಇಎ ಪ್ರದಾನ ನಿರ್ದೇಶಕ ರಾಫೇಲ್‌ ಗ್ರಾಸಿ ಅವಕಾಶ ಕೋರಿದ್ದರು. ಉಕ್ರೇನ್ ಮೇಲ್ವಿಚಾರಣೆಯಲ್ಲಿರುವ ಸ್ಥಾವರನ್ನು ರಷ್ಯಾದ ಪಡೆಗಳು ಅತಿಕ್ರಮಣ ಮಾಡಿವೆ.

ಸ್ಥಾವರ ಅಥವಾ ಅದರ ಸಮೀಪ ದಾಳಿ ನಡೆದಿದೆ ಎಂದು ಉಕ್ರೇನ್ ಮತ್ತು ರಷ್ಯಾದ ಎರಡು ಪ್ರತಿಪಾದಿಸುತ್ತಿರುವ ಕಾರಣ ವಸ್ತುಸ್ಥಿತಿ ಪರಿಶೀಲನೆ ಅಗತ್ಯವಾಗಿತ್ತು. ನಾವು ಉಕ್ರೇನ್‌ನಲ್ಲಿನ ಯುರೋಪ್‌ ಅತಿದೊಡ್ಡ ಅಣುಶಕ್ತಿ ಸ್ಥಾವರ ರಕ್ಷಿಸಬೇಕಾಗಿದೆ ಎಂದು ಈ ಕುರಿತ ಟ್ವೀಟ್‌ನಲ್ಲಿ ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT