ಕಾಬೂಲ್ (ಐಎಎನ್ಎಸ್): ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಬುರ್ಹಾನುದ್ದೀನ್ ರಬ್ಬಾನಿ ಮಂಗಳವಾರ ಸಂಜೆ ತಮ್ಮ ನಿವಾಸದ ಬಳಿ ಆತ್ಮಾಹುತಿ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಆಫ್ಘನ್ ಸರ್ಕಾರ ಹೇಳಿದೆ.

ತಾಲಿಬಾನ್ ಸಮಸ್ಯೆಗೆ ರಾಜಕೀಯ ಪರಿಹಾರ ಕಂಡು ಹಿಡಿಯಲು ಹಮೀದ್ ಕರ್ಜೈ ಸರ್ಕಾರ ರಚಿಸಿದ್ದ ಶಾಂತಿ ಮಂಡಳಿಯ ನೇತೃತ್ವವನ್ನು ರಬ್ಬಾನಿ ವಹಿಸಿದ್ದರು. ವರ್ಷದ ಹಿಂದೆಯೇ ಇದನ್ನು ರಚಿಸಿದ್ದು ಉದ್ದೇಶ ಸಾಧನೆಗಾಗಿ ಕೆಲ ಮಟ್ಟಿಗೆ ಮಾತ್ರ ಮುಂದುವರಿಯಲು ಸಾಧ್ಯವಾಗಿತ್ತು ಎಂದು ಹೆಸರು ಹೇಳಲು ಬಯಸದ ಮೂಲಗಳು ತಿಳಿಸಿವೆ.

ತಾಲಿಬಾನ್ ಸಂಘರ್ಷಕ್ಕೆ ಮೊದಲು ರಬ್ಬಾನಿ ಆಫ್ಘನ್ ಸರ್ಕಾರದ ಅಧ್ಯಕ್ಷರಾಗಿದ್ದರು. ಕಾಬೂಲ್ನಿಂದ ಹೊರ ಹಾಕಲಾಗಿದ್ದ ನಂತರ ಅವರು ಉತ್ತರ ಭಾಗದ ಮೈತ್ರಿಕೂಟ ಮುಖ್ಯಸ್ಥರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.