ಬೀಜಿಂಗ್ (ಪಿಟಿಐ): ಚೀನಾದಲ್ಲಿನ ಭಾರತದ ರಾಯಭಾರಿಯಾಗಿ ಹಿರಿಯ ರಾಜತಾಂತ್ರಿಕ ವಿಜಯ್ ಕೇಶವ್ ಗೋಖಲೆ ಬುಧವಾರ ಅಧಿಕಾರ ವಹಿಸಿಕೊಂಡರು.

ಜರ್ಮನಿಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಅಶೋಕ್ ಕೆ. ಕಾಂತಾ ಅವರ ಜಾಗವನ್ನು ತುಂಬಿದ್ದಾರೆ. 2014ರ ಜನವರಿಯಲ್ಲಿ ಎರಡು ಬಾರಿ ಚೀನಾದ ರಾಯಭಾರಿಯಾಗಿ ನೇಮಕವಾಗಿದ್ದ ಅಶೋಕ್ ಅವರು ಈ ತಿಂಗಳ ಆರಂಭದಲ್ಲಿ ನಿವೃತ್ತರಾಗಿದ್ದರು.

ಭಾರತೀಯ ವಿದೇಶಾಂಗ ಸೇವೆಯಲ್ಲಿ 1981ನೇ ಬ್ಯಾಚ್ನವರಾದ ಕೇಶವ್ ಗೋಖಲೆ ಅವರು, ಹಾಂಕಾಂಗ್, ಹನೊಯ್, ಬೀಜಿಂಗ್ ಮತ್ತು ನ್ಯೂಯಾರ್ಕ್ಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚೀನಾ ಮತ್ತು ಪೂರ್ವ ಏಷ್ಯಾ ವಿಭಾಗಗಳ ನಿರ್ದೇಶಕರಾಗಿ ಮತ್ತು ಪೂರ್ವ ಏಷ್ಯಾದ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

ಚೀನಾದೊಂದಿಗೆ ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿಧ ವಿಚಾರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಗೋಖಲೆ, ಚೀನಿ ಭಾಷೆಯನ್ನು ಅಸ್ಖಲಿತವಾಗಿ ಮಾತನಾಡುವ ಪರಿಣತಿ ಹೊಂದಿದ್ದಾರೆ. ಅತ್ಯಂತ ಸಮರ್ಥ ಹಾಗೂ ವಿವೇಕವುಳ್ಳ ಅಧಿಕಾರಿಗಳಲ್ಲಿ ಒಬ್ಬರು ಎಂಬ ಮೆಚ್ಚುಗೆ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.