ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಸುಡಾನ್‌ಗೆ ಅಮೆರಿಕ ರಾಯಭಾರಿ

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಐಎಎನ್‌ಎಸ್‌): ದಕ್ಷಿಣ ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸಾ­ಚಾರ ನಿಯಂತ್ರಿಸಲು ಅಗತ್ಯ ನೆರವು ನೀಡುವುದಕ್ಕಾಗಿ ವಿಶೇಷ ರಾಯಭಾರಿ­ಯನ್ನು ಕಳುಹಿಸಲಾಗಿದೆ ಎಂದು ಅಮೆ­ರಿಕ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರ್ರಿ ತಿಳಿಸಿದ್ದಾರೆ.

ದಕ್ಷಿಣ ಸುಡಾನ್‌ನ ಸಶಸ್ತ್ರ ಹಿಂಸಾ­ಚಾರ ಕೊನೆಗೊಳಿಸಲು ನಡೆಯುತ್ತಿರುವ ಪ್ರಾದೇಶಿಕ ಪ್ರಯತ್ನಕ್ಕೆ ವಿಶೇಷ ರಾಯ­ಭಾರಿ ಡೊನಾಲ್ಡ್ ಬೂತ್‌ ನೆರವು ನೀಡ­ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಮೇಲೆ ಬಂಡು­ಕೋ­ರರು ದಾಳಿ ನಡೆಸಿ ಇಬ್ಬರು ಭಾರ-ತೀಯ ಯೋಧರು ಸೇರಿದಂತೆ ೨೨ ಮಂದಿ­ಯನ್ನು ಹತ್ಯೆ ಮಾಡಿ­ರುವುದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT