ಪ್ಯಾರಿಸ್ (ಎಪಿ): ಫ್ರಾನ್ಸ್‌ನ ಎರಡು ಪಟ್ಟಣಗಳಲ್ಲಿ ಮಸೀದಿಗಳ ಮೇಲೆ ದಾಳಿ ನಡೆದಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಧ್ಯರಾತ್ರಿ ಬಳಿಕ ಲೆಮಾನ್ಸ್ ನಗರದ ಮಸೀದಿಯೊಂದರ ಮೇಲೆ ಮೂರು ನಿಷ್ಕ್ರಿಯ ಗ್ರೆನೇಡ್ಗಳನ್ನು ಎಸೆಯಲಾಗಿತ್ತು. ದಕ್ಷಿಣ ಫ್ರಾನ್ಸ್‌ನ ನರ್‌ಬೋನ್ ಬಳಿಯ ಪೊರ್ಟಾನೌವೆಲ್ ಜಿಲ್ಲೆಯ ಮಸೀದಿಯೊಂದರ ಪ್ರಾರ್ಥನಾ ಮಂದಿರವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಯಿತು.

ಗುಂಡಿನ ದಾಳಿ: ಪ್ಯಾರಿಸ್ ಹೊರಗೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಪರಿ-ಣಾಮ ಮಹಿಳಾ ಪೊಲೀಸ್ ಹಾಗೂ ಉದ್ಯೋಗಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ವಿಶ್ವಸಂಸ್ಥೆ ಖಂಡನೆ: ಫ್ರೆಂಚ್ ವಾರಪತ್ರಿಕೆ ಕಚೇರಿ ಮೇಲೆ ನಡೆದ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ. ‘ಈ ಕೃತ್ಯ ಇದು ಅಭಿವ್ಯಕ್ತಿ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ’ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.