ಕೊಲಂಬೊ (ಪಿಟಿಐ): ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ಅಧಿಕಾರಾವಧಿಯ ವೇಳೆ ನಡೆಸುತ್ತಿದ್ದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ (ಎನ್‌ಜಿಒ) ಮೂಲಕ ಅಕ್ರಮ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ರಾಜಪಕ್ಸೆ ಅವರ ಪತ್ನಿ ಶೀರಂತಿ ರಾಜಪಕ್ಸೆ ಅವರನ್ನು ಲಂಕಾ ಪೊಲೀಸರು ಸೋಮವಾರ ವಿಚಾರಣೆ ನಡೆಸಿದರು.

ಕೇಂದ್ರ ಸ್ಥಾನದಿಂದ ಹೊರಭಾಗದ ರಹಸ್ಯ ಸ್ಥಳದಲ್ಲಿ ಹಣಕಾಸು ಅಪರಾಧ ತನಿಖಾ ವಿಭಾಗ (ಎಫ್‌ಸಿಐಡಿ)ದಿಂದ ಶೀರಂತಿ ಎರಡು ತಾಸು ವಿಚಾರಣೆ ಎದುರಿಸಿದರು ಎಂದು ಮೂಲಗಳು ತಿಳಿಸಿವೆ.

‘ಕಾರ್ಲ್‌ಟನ್ ಸಿರಿಲಿಯಾ ಸೇವಿಯ’ ಎಂಬ ಸರ್ಕಾರೇತರ ಸಂಸ್ಥೆಯ ಬ್ಯಾಂಕ್ ಖಾತೆಯ ಮೂಲಕ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪದ ವಿಚಾರಣೆಗೆ ಹಾಜರಾಗುವಂತೆ ಶೀರಂತಿ ಅವರಿಗೆ ಎಫ್‌ಸಿಐಡಿ ನೋಟಿಸ್ ಜಾರಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.