ಲಂಡನ್, (ಪಿಟಿಐ): ಅಗಸೆ ಬೀಜವುಳ್ಳ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ತಡೆಯಬಹುದು ಎನ್ನುತ್ತದೆ ಹೊಸ ಸಂಶೋಧನೆ.

ಅಗಸೆ ಬೀಜದ ಆಹಾರ ಕ್ಯಾನ್ಸರ್ ರೋಗಿಗಳ ಮರಣ ಪ್ರಮಾಣವನ್ನು ಶೇ 40 ರಷ್ಟು ತಡೆಯುತ್ತದೆ ಎಂದು ಜರ್ಮನಿಯ ಹೆಡಲ್‌ಬರ್ಗ್‌ನಲ್ಲಿರುವ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಹೇಳಿದೆ. ಆಹಾರ ಧಾನ್ಯ, ತರಕಾರಿ, ಗೋಧಿ ಪದಾರ್ಥಗಳನ್ನು ನಿರಂತರವಾಗಿ ಸೇವಿಸುವುದರಿಂದ ಅದರಲ್ಲಿರುವ `ಫೈಟೋ ಈಸ್ಟ್ರೋಜನ್~ ಎಂಬ ರಾಸಾಯನಿಕ ಕ್ಯಾನ್ಸರ್‌ಕಾರಕ ಜೀವಕೋಶಗಳನ್ನು ನಾಶಪಡಿಸುತ್ತದೆ.

ಉಳಿದೆಲ್ಲ ಆಹಾರ ಪದಾರ್ಥಳಿಗಿಂತ ಅಗಸೆ ಬೀಜದಲ್ಲಿ ಹೆಚ್ಚಿನ ಪ್ರಮಾಣದ `ಫೈಟೋ ಈಸ್ಟ್ರೋಜನ್~ ಇರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಸಂಶೋಧಕರು. ಇದಕ್ಕಾಗಿ ಸುಮಾರು ಸಾವಿರ ಸ್ತನ ಕ್ಯಾನ್ಸರ್ ರೋಗಿಗಳ ರಕ್ತ ಮಾದರಿಗಳನ್ನು ಸತತವಾಗಿ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ.

1.6 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್: ಶೇ 60 ರಷ್ಟು ಅಭಿವೃದ್ಧಿಶೀಲ ದೇಶಗಳಲ್ಲಿ ಸ್ತನ ಹಾಗೂ ಗರ್ಭಕೊರಳಿನ ಕ್ಯಾನ್ಸರ್‌ನಿಂದ ಮಹಿಳೆಯರು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ ಎಂದು ಹೊಸ ಅಧ್ಯನವೊಂದು ಹೇಳಿದೆ. 1980 ರಲ್ಲಿ ಸ್ತನಕ್ಯಾನ್ಸರ್ ರೋಗಿಗಳ ಸಂಖ್ಯೆ 6,41,000 ಇತ್ತು. 2010 ರಲ್ಲಿ ಈ ಪ್ರಮಾಣವು 1.6 ದಶಲಕ್ಷಕ್ಕೆ ಏರಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.