ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೇನ್‌ನಲ್ಲಿ ಆರ್ಥಿಕ ಬಿಕ್ಕಟ್ಟು: ಜನರಿಂದ ಬೃಹತ್ ಪ್ರತಿಭಟನೆ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಮ್ಯಾಡ್ರಿಡ್ (ಎಎಫ್‌ಪಿ): ಸ್ಪೇನ್‌ನಲ್ಲಿ ಕೆಲವು ದಿನಗಳಿಂದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಗಳಿಂದ ಜರ್ಜರಿತರಾಗಿರುವ ಜನರು ಸರ್ಕಾರದ ಬಜೆಟ್ ಕಡಿತ ನಿರ್ಧಾರವನ್ನು ವಿರೋಧಿಸಿ ಭಾನುವಾರ ಬೃಹತ್ ರ‌್ಯಾಲಿ ನಡೆಸಿದರು.

ನಗರದ ಹೊರವಲಯದಲ್ಲಿ ಸೇರಿದ್ದ ಸುಮಾರು 35ರಿಂದ 40 ಸಾವಿರ ಜನರು ಸಾಲುಗಳಲ್ಲಿ ನಗರ ದೊಳಗೆ ಪ್ರವೇಶಿಸಿ ಸಂಸತ್ ಎದುರು ಜಮಾಯಿಸಿದರು. ದೊಡ್ಡ ಮಟ್ಟದ ಜನರ ಗುಂಪನ್ನು ಎದುರಿಸಲು ವಿವಿಧ ಕಸರತ್ತು ನಡೆಸಿ ವಿಫಲ ರಾದರು. 

ಬ್ಯಾಂಕ್‌ಗಳು ಮತ್ತು ರಾಜಕಾರ ಣಿಗಳು ಹೇಳುವಂತೆ ದೇಶದ ಈ ಸ್ಥಿತಿಗೆ ನಿರುದ್ಯೋಗ ಸಮಸ್ಯೆ ಕಾರಣ ವಲ್ಲ. ಇದನ್ನು ತಾವು ಒಪ್ಪುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿ ದರು. ಆರ್ಥಿಕ ಹಿಂಜರಿತಕ್ಕೆ ಬ್ಯಾಂಕ್ ಹಾಗೂ ರಾಜಕಾರಣಿಗಳು ಕಾರಣ ಎಂದು ಅವರು ಆರೋಪಿಸಿದರು. ಈ ಬೃಹತ್ ರ‌್ಯಾಲಿಗೆ `ಇಂಡಿಗ್ನಂಟ್ಸ್~ ಎಂದು ಹೆಸರಿಡಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT