ವಾಷಿಂಗ್ಟನ್ (ಪಿಟಿಐ/ಎಎಫ್ಪಿ): ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯು (ಎನ್ಎಸ್ಎ) ಅಂತರ್ಜಾಲ ಮತ್ತು ದೂರವಾಣಿ ಜಾಲದಿಂದ ಸಂಗ್ರಹಿಸಿರುವ ರಹಸ್ಯ ಮಾಹಿತಿಯ ಬೇಹುಗಾರಿಕೆಯನ್ನು ಅಮೆರಿಕದ ಸೆನೆಟ್ ಮತ್ತು ಅದರ ಬೇಹುಗಾರಿಕಾ ಸ್ಥಾಯಿ ಸಮಿತಿಯು ಸಮರ್ಥಿಸಿಕೊಂಡಿದೆ.

ಇಂತಹ ಬೇಹುಗಾರಿಕೆಯಿಂದಾಗಿಯೇ ಮುಂಬೈ ಮೇಲೆ ನಡೆದ ದಾಳಿ ಸೇರಿದಂತೆ ಉಗ್ರರು ನಡೆಸಿದ ವಿವಿಧ ವಿಧ್ವಂಸಕ ಕೃತ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸಾಧ್ಯವಾಯಿತು. ಮುಂಬೈ ದಾಳಿಯ ಪ್ರಮುಖ ಸಂಚುಕೋರನಾದ ಡೇವಿಡ್ ಹೆಡ್ಲಿಯನ್ನು ಪತ್ತೆ ಹಚ್ಚಲಾಯಿತು ಎಂದೂ ಹೇಳಿದೆ.

9700 ಕೋಟಿ ರಹಸ್ಯ ಮಾಹಿತಿ ಸಂಗ್ರಹ: (ಲಂಡನ್ ವರದಿ): ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ಎಸ್ಎ) `ಬೌಂಡ್ಲೆಸ್ ಇನ್ಫಾರ್ಮಂಟ್' (ದತ್ತಾಂಶ ಕದಿಯುವ ತಂತ್ರಾಶ) ಮೂಲಕ ಕಲೆ ಹಾಕಿರುವ ರಹಸ್ಯ ಮಾಹಿತಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ತನಗೆ ದೊರಕಿವೆ ಎಂದು `ಗಾರ್ಡಿಯನ್' ಪತ್ರಿಕೆ ಹೇಳಿಕೊಂಡಿದೆ.

`ಬೌಂಡ್ಲೆಸ್ ಇನ್ಫಾರ್ಮಂಟ್' ಸಂಗ್ರಹಿಸಿರುವ ದತ್ತಾಂಶಗಳು, ವಿವಿಧ ದೇಶಗಳ ಅಂತರ್ಜಾಲ ತಾಣಕ್ಕೆ ಲಗ್ಗೆಯಿಟ್ಟ ನಕ್ಷೆ, ಕಂಪ್ಯೂಟರ್ ಮತ್ತು ದೂರವಾಣಿ ಮೂಲಕ ಹೆಕ್ಕಿತೆಗೆದ ಅಪಾರ ಮಾಹಿತಿಗಳ ದಾಖಲೆಗಳೂ ತನ್ನ ಬಳಿ ಇವೆ ಎಂದು ಪತ್ರಿಕೆ ತಿಳಿಸಿದೆ.

ಕಳೆದ ಮಾರ್ಚ್ನಲ್ಲಿ `ಬೌಂಡ್ಲೆಸ್ ಇನ್ಫಾರ್ಮಂಟ್' ಮೂಲಕ ಜಾಗತಿಕವಾಗಿ 9,700 ಕೋಟಿ ರಹಸ್ಯ ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದು ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಾಂಗ್ಕಾಂಗ್ ತೊರೆಯಲು ಅಮೆರಿಕ ಪ್ರಜೆಗೆ ಒತ್ತಾಯ
ಹಾಂಗ್ಕಾಂಗ್: ಅಮೆರಿಕ ಕಲೆ ಹಾಕಿರುವ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಅಮೆರಿಕದ ಪ್ರಜೆ ಎಡ್ವರ್ಡ್ ಜೆ. ಸ್ನೋಡೆನ್ ಕೂಡಲೇ ಹಾಂಗ್ಕಾಂಗ್ ತೊರೆಯಬೇಕು ಎಂದು ಚೀನಾ ಪರವಾಗಿರುವ ಜನಪ್ರತಿನಿಧಿಯೊಬ್ಬರು ಆಗ್ರಹಿಸಿದ್ದಾರೆ.

`ಎಡ್ವರ್ಡ್ ಗಡಿಪಾರಿಗೆ ಸರ್ಕಾರಕ್ಕೆ ಮನವಿ ಸಲ್ಲಿಕೆ ಆಗಿದೆಯೇ ಅಥವಾ ಇಲ್ಲವೇ ಎಂಬುದು ನನಗೆ ತಿಳಿದಿಲ್ಲ. ಆದರೆ, ಅವರು ಕೂಡಲೇ ಹಾಂಗ್ಕಾಂಗ್ ತೊರೆಯುವುದು ಒಳ್ಳೆಯದು' ಎಂದು ಹಾಂಗ್ಕಾಂಗ್ ನಗರದ ಭದ್ರತಾ ವ್ಯವಹಾರಗಳ ಉಸ್ತುವಾರಿಯೂ ಆಗಿರುವ ರೆಜಿನಾ ಹೇಳಿದ್ದಾರೆ.

ಎಡ್ವರ್ಡ್ ಎಲ್ಲಿ ನೆಲೆಸಿದ್ದಾರೆ ಎಂದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ, `ಗಾರ್ಡಿಯನ್' ಪತ್ರಿಕೆಯಲ್ಲಿ ಭಾನುವಾರ ಪ್ರಕಟವಾಗಿರುವ ಅವರ ಸಂದರ್ಶನದಲ್ಲಿ `ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶ ಇರುವ ಹಾಂಗ್ಕಾಂಗ್ನಲ್ಲಿ ನೆಲೆಸುವುದು ನನ್ನ ಬಯಕೆ' ಎಂದಿದ್ದರು. ಹಾಗಾಗಿ ಅವರು ಹಾಂಗ್ಕಾಂಗ್ನಲ್ಲೇ ತಲೆಮರೆಸಿಕೊಂಡಿದ್ದಾರೆ ಎಂದು ನಂಬಲಾಗಿದೆ.

ಸೈಬರ್ ದಾಳಿಯ ಮೂಲಕ ಅಮೆರಿಕ ಸಂಗ್ರಹಿಸಿರುವ ಮಹತ್ವದ ರಹಸ್ಯ ಮಾಹಿತಿಗಳು ಸೋರಿಕೆಯಾಗಲು ಎಡ್ವರ್ಡ್ ಕಾರಣ ಎನ್ನಲಾಗಿದೆ. 29 ವರ್ಷದ ಎಡ್ವರ್ಡ್, ಅಮೆರಿಕದ `ಎನ್ಎಸ್ಎ', `ಸಿಐಎ' ಸೇರಿದಂತೆ ಅನೇಕ ಬೇಹುಗಾರಿಕಾ ಸಂಸ್ಥೆಗಳಿಗೆ ತಂತ್ರಜ್ಞಾನದ ನೆರವು ಮತ್ತು ತಜ್ಞರ ಸಲಹೆಯನ್ನು ನೀಡುತ್ತಿದ್ದ ಉದ್ದಿಮೆಯಲ್ಲಿ ಉದ್ಯೋಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.