ಸೋಮವಾರ, ಏಪ್ರಿಲ್ 12, 2021
27 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಗುರುವಾರ, 8–10–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಜಿ ಪ್ರಧಾನಿ ಇಂದಿರಾ ಗಾಂಧಿ

ಕಾರ್ಯಕ್ರಮ ರೂಪಿಸಲು ಯೋಜನಾ ಆಯೋಗಕ್ಕೆ ಕರೆ

ನವದೆಹಲಿ, ಅ. 7– ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಒದಗಿಸಲು ಈ ಕೂಡಲೇ ಯೋಜನೆಗಳನ್ನು ರೂಪಿಸಬೇಕೆಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಯೋಜನಾ ಮಂಡಳಿಗೆ ಸೂಚಿಸಿದರು.

ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಪ್ರಮಾಣದ ಜನರಿಗೆ, ಅದರಲ್ಲೂ ಮುಖ್ಯವಾಗಿ ಅರೆನುರಿತ ಹಾಗೂ ತರಬೇತಿ ಪಡೆಯದ ಕಾರ್ಮಿಕರಿಗೆ ಉದ್ಯೋಗ ಒದಗಿಸಬಹುದಾದ ಯೋಜನೆಗಳನ್ನು ರೂಪಿಸುವುದರ ಮೂಲಕ ಈ ಕಾರ್ಯವನ್ನು
ಪ್ರಾರಂಭಿಸಬಹುದೆಂದೂ ಪ್ರಧಾನ ಮಂತ್ರಿಯವರು ಯೋಜನಾ ಮಂಡಳಿಯ ಪೂರ್ಣ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

ನಿರುದ್ಯೋಗ ಸಮಸ್ಯೆ ಸ್ಫೋಟಕ ಮಟ್ಟ ಮುಟ್ಟುತ್ತಾ ಇದೆಯೆಂದೂ ಸಮಾಜದ ಎಲ್ಲ ವರ್ಗಗಳ ಜನರ ಉದ್ಯೋಗಾವಕಾಶ ಹೆಚ್ಚಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದೂ ಶ್ರೀಮತಿ ಗಾಂಧಿ ನುಡಿದರು.

ಸರ್ಕಾರಿ ಬ್ಯಾಂಕುಗಳಲ್ಲಿ ‘ಕೆಟ್ಟ ಆಡಳಿತ’

ಜೈಪುರ, ಅ. 7– ರಾಷ್ಟ್ರೀಕರಣವಾದ ನಂತರ ರಾಷ್ಟ್ರೀಕೃತ ಬ್ಯಾಂಕುಗಳು ‘ಬಹಳ ಕೆಟ್ಟದಾಗಿ’ ಕಾರ್ಯ ನಿರ್ವಹಿಸುತ್ತಿವೆ ಎಂದು ಮೊರಾರ್ಜಿ ದೇಸಾಯಿ ಇಂದು ತಿಳಿಸಿದರು.

ಬ್ಯಾಂಕ್ ವ್ಯವಹಾರಗಳಲ್ಲಿ ಸರ್ಕಾರ ಮತ್ತು ರಿಸರ್ವ್ ಬ್ಯಾಂಕು ಹಸ್ತಕ್ಷೇಪ ಮಾಡುತ್ತಿವೆ ಎಂದು ಆರೋಪಿಸಿದ ದೇಸಾಯಿ ಅವರು, ಇದರಿಂದಾಗಿ ಎಲ್ಲೆಡೆಯೂ ‘ಕೆಟ್ಟ ಆಡಳಿತ’ ತಲೆದೋರಿದೆ ಎಂದರು.

ತಾವು ಅಧಿಕಾರದಲ್ಲಿದ್ದಾಗ, ಹಣದುಬ್ಬರ ಪ್ರವೃತ್ತಿ ನಿಂತು ಬೆಲೆಗಳು ಸ್ಥಿರವಾಗಿದ್ದವು ಎಂದೂ ಮಾಜಿ ಹಣಕಾಸು ಸಚಿವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು